1.ನಾನಿಲ್ಲಿಲ್ಲ
ಅಚ್ಛ ಬಿಳಿಯ ಮೋಡವಿರಲು,
ಪಚ್ಚೆ ಗಿಡಮರ ಸುತ್ತಲಿರಲು,
ವರ್ಷಧಾರೆ ಚಿಮ್ಮುತಿರಲು,
ನಾನು ನನ್ನಲಿಲ್ಲ..
ಮರವು ಖುಷಿಯ ಪಡುತಲಿರಲು,
ಬಳ್ಳಿ ಜೋಕಾಲಿಯಾಡುತಿರಲು,
ಛತ್ರಿ ಹಿಡಿದು ಕುಣಿಯುತಿರಲು,
ನಾನು ನನ್ನಲಿಲ್ಲ...
ಮಳೆಯ ನೀರು ಜಿನುಗುತಿರಲು,
ಪಶು-ಪಕ್ಷಿಗಳು ಮಲಗಿರಲು,
ಧರೆಯು ನಾಟ್ಯವಾಡುತಿರಲು
ನಾನು ನನ್ನಲಿಲ್ಲ...
ಮುತ್ತಿನ ಹನಿ ಉದುರುತಿರಲು,
ಸುತ್ತ ಕಾಡು ನೆನೆಯುತಿರಲು,
ದಾರಿಯುದ್ದ ಸಾಗುತಿರಲು
ನಾನು ನನ್ನಲಿಲ್ಲ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ