10. ಗಝಲ್
ಶುದ್ಧ ನೀರು, ಶುದ್ಧ ಗಾಳಿ ಬೇಕೇ ಕಡಿಯದಿರಿ ಮರವನ್ನು..
ನಿತ್ಯ ಬೆಳೆ, ಒಳ್ಳೆ ಮಳೆ ಬೇಕೇ ಬೆಳೆಸಿರಿ ಗಿಡ ಮರವನ್ನು...
ನೆರಳಲ್ಲಿ ವಿಶ್ರಾಂತಿ ಪಡೆದು
ದಣಿವಾರಿಸಿ ,
ದುಡಿತ ದುಡಿದು ನೆಮ್ಮದಿ ಪಡೆಯಲು ಬೆಳೆಸಿರಿ ಮರವನ್ನು..
ಊಟವ ಬೇಯುವ ಸೌದೆಯ ಒಲೆಗೆ
ಆಟವ ಆಡುವ ಬ್ಯಾಟಿಗೆ ಬೆಳೆಸಿರಿ ಮರವನ್ನು..
ಹೆತ್ತ ತಾಯಂದದಿ ಕಷ್ಟವ ಸಹಿಸಿ
ಸುಖವನು ಬಯಸಲು ಉಳಿಸಿರಿ ಮರವನ್ನು...
ಮನೆಯಲಿ ಒಳ್ಳೆಯ ಗಾಳಿಯು ಬರಲು
ಮನದಲಿ ಒಳ್ಳೆಯ ಯೋಚನೆ ಬರಲು ಬೆಳೆಸಿರಿ ಮರವನ್ನು...
ಆರೋಗ್ಯ ಭಾಗ್ಯವ ಚೆನ್ನಾಗಿ ಪಡೆದು
ಕರುಣೆಯ ತೋರಿ ಹಸಿರಿನ ಮೇಲೆ ಬೆಳೆಸಿರಿ ಮರವನ್ನು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ