ಶುಕ್ರವಾರ, ಫೆಬ್ರವರಿ 2, 2018

101. ನಮ್ಮ ಸಂಸ್ಕೃತಿ ಉಳಿಸಬೇಕು

ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವಲ್ಲಿ ನಮ್ಮೆಲ್ಲರ ಪಾತ್ರ -ಈ ವಿಷಯಕ್ಕೆ ಲೇಖನ

*ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು*
    ನಮ್ಮ ಸಂಸ್ಕೃತಿ ಮತ್ತು ಪರಂಪರೆ ಏನೆಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕು. ತದನಂತರ ಅದನ್ನು ನಾವು ಏಕೆ ಉಳಿಸಬೇಕು ಮತ್ತು ಬೆಳೆಸಬೇಕು ಎಂಬುದನ್ನು ಅರ್ಥೈಸಿಕೊಳ್ಳಬೇಕು. ತದನಂತರ ನಮಗೆ ಜ್ಞಾನದ ಅರಿವಾಗುತ್ತದೆ. ಅಲ್ಲಿಂದ ಅದನ್ನು ಪಾಲಿಸಲು ಪ್ರಾರಂಭಿಸಬೇಕು. ಯಾರೋ ಹೇಳಿದರೆಂಬ ಅಂಧಾನುಕರಣೆ ಸಲ್ಲದು.
  ನಾವು ನಮ್ಮ ಸಂಸ್ಕೃತಿ ಪರಂಪರೆಗಳನ್ನು ಪಾಲಿಸಿದರೆ ಮಕ್ಕಳು ನಮ್ಮನ್ನು ನೋಡಿ ತಾನಾಗೇ ಕಲಿತುಕೊಳ್ಳುತ್ತಾರೆ. ನಾವದನ್ನು ಮುಂದಿನ ಪೀಳಿಗೆಗೆ ಹಂಚಿದಂತೆಯೂ ಆಗುತ್ತದೆ.
   ಉದಾಹರಣೆಗೆ ಯಕ್ಷಗಾನ. ನಾವು ಮಾಡದಿದ್ದರೂ ನೋಡಬಹುದು, ಮಕ್ಕಳಿಗೆ ಅದನ್ನು ತೋರಿಸಿ ಪರಿಚಯ ಮಾಡಿ ಕೊಡಬಹುದು.
  ಕೈಗಳಿಗೆ ಬಳೆಗಳನ್ನು ತೊಡುವುದು, ಕಾಲ ಗೆಜ್ಜೆ, ಹಣೆಗೆ ಕುಂಕುಮ ಅಥವಾ ಶ್ರೀಗಂಧ ಲೇಪನ, ಮದುವೆಯಾದ ಬಳಿಕ ಕಾಲಿಗೆ ಕಾಲುಂಗುರ, ಕೊರಳಲ್ಲಿ ತಾಳಿ ಸರ ಇವು ಭಾರತೀಯ ನಾರಿಯರ ಲಕ್ಷಣ. ಇಂದು ಪಾಶ್ಚಾತ್ಯ ಅನುಕರಣೆಯಿಂದ ಇವೆಲ್ಲ ಮಾಯವಾಗುತ್ತಿವೆ.
   ದಿನನಿತ್ಯ ಸಾಯಂಕಾಲ ಕುಟುಂಬವೆಲ್ಲ ಸೇರಿ ಮಾಡುವ ದೇವರ ಭಜನೆ ಮಾಯವಾಗಿ ಆ ಜಾಗದಲ್ಲಿ ಮೊಬೈಲ್ ಸಾಮಾಜಿಕ ಜಾಲ ತಾಣಗಳು, ಧಾರಾವಾಹಿಗಳು, ಹೋಮ್ ವರ್ಕ್ ಗಳು, ಪ್ರಾಜೆಕ್ಟ್ ವರ್ಕ್ ಗಳು ವಕ್ಕರಿಸಿಕೊಂಡಿವೆ.
   ನಮ್ಮ ಮನಸಿನಲ್ಲಿ ನಾವು ಮೊದಲು ಬದಲಾಗಿ, ನಾವದನ್ನು ಪಾಲಿಸಿದರೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಲು ಕಷ್ಟವಿದೆಯೇ?ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ