ಮಂಗಳವಾರ, ಫೆಬ್ರವರಿ 27, 2018

139. ಕವನ-ಭ್ರಮಾಲೋಕ

ಕವನ-ಭ್ರಮಾಲೋಕ

ನಾನಾಗಿದ್ದೆ ಪುಟ್ಟ ಪುಟಾಣಿ ಬಣ್ಣದ ಚಿಟ್ಟೆ,
ಹೂವಿಂದ ಹೂವಿಗೆ ನಾ ಹಾರಿ ಬಿಟ್ಟೆ...
ಬಣ್ಣದ  ರೆಕ್ಕೆಯ ಹಾರಿಸುತಿದ್ದೆ..
ಸುಣ್ಣದ ಬಣ್ಣವ ಕಾಣುತಲಿದ್ದೆ..

ನಾನಾಗಿದ್ದೆ ವೇಗದಿ ಓಡುವ ಚಿರತೆ..
ಹುಸೇನ್ ಬೋಲ್ಟನ್ನು ಸೋಲಿಸುತಲಿದ್ದೆ,
ಮಾನವ ಮೋಸಬುದ್ಧಿ ತೋರಿಸಿಬಿಟ್ಟ,
ಬಲೆಯಿಟ್ಟು ನನ್ನ ಬೀಳಿಸಿ ಬಿಟ್ಟ....

ನಾನಾಗಿದ್ದೆ ಸ್ವಚ್ಛಂದದಿ ಹಾರುವ ಹಕ್ಕಿ
ಕೊಡುತಲಿದ್ದೆ ಮರಿಗಳಿಗೆ ಕಾಳನು ಹೆಕ್ಕಿ,
ತಿನ್ನುತಿದ್ದವು ಮರಿಗಳು ಕಾಳ ಕುಕ್ಕಿ, ಕುಕ್ಕಿ..
ಬಾನಾಡಿ ನಾನಾಗಿದ್ದೆ ಭ್ರಮಾಲೋಕದ ಚುಕ್ಕಿ...

ನಾನಾಗಿದ್ದೆ ಮಾತಾಡುವ ಹಸಿರಿನ ಗಿಣಿ
ಪೋಣಿಸುತ್ತಿದ್ದಳು ಹುಡುಗಿಯೊಬ್ಬಳು ಕೆಳಗೆ ತನ್ನ ಸರಕೆ ಮಣಿ
ಕರೆದಳು ಅವಳು 'ಬಾ ನನ್ನ ಅರಗಿಣಿ'
ಆಗ ಗೊತ್ತಾಯ್ತು ಅದು ನನಗಲ್ಲ, ಅದವಳ ಪತಿ-ಶಿರೋಮಣಿ..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ