ಸೋಮವಾರ, ಫೆಬ್ರವರಿ 5, 2018

104. ಕವನ-ನನ್ನ ಭಾರತ

1. ನನ್ನ ಕಲ್ಪನೆಯ ಭಾರತ

ನನ್ನ ಕಲ್ಪನೆಯ ದೇಶ
ಗಾಂಧಿಗಿಂತ ಭಿನ್ನವಿಲ್ಲ,
ಜಾತಿ-ಮತ ಭೇದವಂತೂ
ಎಲ್ಲೆಲ್ಲೂ ಇಲ್ಲವೇ ಇಲ್ಲ!//

ಬಡತನದ ರೇಖೆಯಿಲ್ಲ
ಸಿರಿತನದ ಸವಾಲಿಲ್ಲ,
ಒಗ್ಗಟ್ಟಿನ ಸಹಬಾಳ್ವೆಯ
ದಿನಗಳೇ ಎಲ್ಲ...//

ಗುಡಿ-ಚರ್ಚು-ಮಸೀದಿಗಳು
ಎಲ್ಲವೂ ಒಂದೇ
ದೇವರನೇ ಕಾಣುವುದಲ್ಲಿ
ಎಲ್ಲಾ ಮಂದಿ...//

ದೇಶಕ್ಕೆರಡೇ ಪಾರ್ಟಿ,
ಆಡಳಿತ, ವಿರೋಧ
ಚೆನ್ನಾಗಿ ಆಳಿದರೆ ಗದ್ದುಗೆ,
ವಿಮರ್ಶಿಸೆ ಅವನು ಎದುರಿಗೆ//

ನೀರಿಗೆ,ಕಾಡಿಗೆ, ಮಳೆ-ಬೆಳೆಗೆ ಬರವಿಲ್ಲ
ಹಸಿರ ಸೀರೆಯುಟ್ಟು ತಾಯಿ ಭಾರತಿಯ ನಾಟ್ಯ
ಚೆನ್ನಾಗಿ ದುಡಿಬೇಕು, ಪಡಿಬೇಕು ,ತಿನಬೇಕು
ಆಗಲೇ ದೇಶದೊಳಿತು ಸಾಧ್ಯ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ