1. ನಾ ಮುಟ್ಟುವೆನೆ
ನನ್ನಯ ಗುರಿಯು ಚಂದಿರನೆಡೆಗೆ
ನಾ ಮುಟ್ಟುವೆನೆ ಅವನೆಡೆಗೆ...
ಕೈಯನು ಚಾಚಿ ಹಿಡಿಯಲು ಬಲ್ಲೆ,
ನಾ ಮುಟ್ಟುವೆನೆ ಗುರಿಯೆಡೆಗೆ..
ಆಗಸದಂಚಿಗೆ ಸೇರಲು ಬೇಕು
ನಾ ಮುಟ್ಟುವೆನೆ ಗುರಿಯೆಡೆಗೆ...
ಸೋಮನ ಬಿಲ್ಲನು ಕದಿಯಲು ಬೇಕು
ನಾ ಮುಟ್ಟುವೆನೆ ಗುರಿಯೆಡೆಗೆ...
ಚಂದ್ರನ ಚರಣವ ಸ್ಪರ್ಶಿಸ ಬೇಕು
ನಾ ಮುಟ್ಟುವೆನೆ ಗುರಿಯೆಡೆಗೆ..
ಬಾಳಲಿ ತುಂಬಾ ಸಾಧಿಸಬೇಕು
ನಾ ಮುಟ್ಟುವೆನೆ ಗುರಿಯೆಡೆಗೆ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ