1. ನಮಿಸೋಣ
ಬಾನಲಿ ಬಾನಾಡಿಯಾಗಿ ಹಾರೋಣ
ಭವಿತವ ಭವ್ಯಗೊಳಿಸೋಣ..
ಭರದಿ ಭಾವನೆ ಉಳಿಸೋಣ
ಬೆಳಕಿನ ಹಣತೆಯ ಬೆಳಗೋಣ..
ಭವ್ಯ ಪರಂಪರೆ ಕಟ್ಟೋಣ
ಭೂಮಿಯ ಭಾರವ ಕಳೆಯೋಣ
ಭಾವನೆಗಳ ಜೊತೆಗೆ ಹಂಚೋಣ
ಭುವಿಯಲಿ ಒಗ್ಗಟ್ಟಿಂದ ಬಾಳೋಣ..
ಭುವನದಲಿ ಶಾಂತಿಯ ಬೀಜ ಬಿತ್ತೋಣ
ಭವ್ಯ ಭವಿಷ್ಯದ ಕನಸು ಕಾಣೋಣ
ಭರತ ಖಂಡದ ಕೀರ್ತಿ ಪತಾಕೆ ಹಾರಿಸೋಣ
ಭಕ್ತಿಯಿಂದ ಭಾರತಿಗೆ ನಮಿಸೋಣ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ