ಭಾನುವಾರ, ಫೆಬ್ರವರಿ 25, 2018

136. ಶಿವಸ್ತುತಿ-4

5. *ದೇವರ ದೇವ*

ದೇವರ ದೇವನೇ ಮಯಾದೇವ
ಅರ್ಧನಾರೀಶ್ವರ  ಈ ದೇವ..
ಭಕುತರ ಎಂದೂ ಜತನದಿ ಕಾಯುವ
ಮೂರನೆ ಕಣ್ಣಲ್ಲಿ ಕಟುಕನ ನೋಡುವ //೧//

ಭಕ್ತಿಗೆ ಒಂದು ವರವನು ಕೊಡುವ,
ಲಿಂಗ ಪೂಜೆಗೆ ಮುಕ್ತಿಯ ಕೊಡುವ..
ಜನರನು ಎಂದೂ ತನ್ನೆಡೆ ಸೆಳೆವ,
ನಮ್ಮಯ ಜೀವನ ಪಾವನಗೊಳಿಸುವ.. //೨//

ಅಷ್ಟಮೂರ್ತನೂ, ಅನೇಕಾತ್ಮನೂ
ಶುದ್ಧವಿಗ್ರಹನೂ, ದೇವರ ದೇವನೂ..
ಭಕ್ತಿಗೆ ಎಂದೂ ಮೆಚ್ಚದೇ ಇರನು,
ತನ್ನಯ ಭಕ್ತರ ಸಲಹುತಲಿರುವನು..//೩//

ಪಶುಪತಿ ಈಶ್ವರ ಅವ್ಯಕ್ತ  ಅನಂತ,
ದೇವನೇ ನೀನು ಭಕುತರ ಸ್ವಂತ..
ಕರುಣೆಯ ನೀಡೋ ನಮ್ಮನು ಹರಸುತ,
ಬಂದೆವು ಬಳಿಗೆ ತಲೆಯನು ಬಾಗುತ.. //೪//

ಶಂಕರ, ಶಶಿಧರ, ಶಿವ ಗಂಗಾಧರ,
ಶ್ರೀಕರ, ವಿಷಕಂಠ, ಉಗ್ರ, ಕುಮಾರ....
ಜಟಾಧರ, ಅನೀಶ್ವರ, ವೀರ ಕಠೋರ!
ನಮ್ಮ ಕಷ್ಟಗಳ ಕಳುಹಿಸೋ ದೂರ//೫//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ