4. *ಮಾದೇವ ಸ್ತುತಿ*
ತಲೆಯ ಮೇಲೆ ಗಂಗೆಯ ಹೊತ್ತ
ನಮ್ಮ ದೇವ ಮಾದೇವ..
ಹುಲಿಯ ಚರ್ಮವ ತೊಟ್ಟು ಕುಳಿತ
ಮುದ್ದು ಶಿವನು ಮಾದೇವ //೧//
ನಾಗರಾಜನ ಕತ್ತಲಿ ಹೊತ್ತ
ಲಿಂಗ ದೇವ ಮಾದೇವ..
ಬೆನ್ನ ಹಿಂದೆ ಎತ್ತನು ಬಿಟ್ಟು
ತಪಸ್ಸಿಗೆ ಕುಳಿತ ಮಾದೇವ//೨//
ಪಾರ್ವತಿ ಪತಿಯು, ಗಣಪನ ತಂದೆ
ಶಂಭೋ ಶಂಭೋ ಮಾದೇವ...
ವಿಷವನ್ನು ಕುಡಿದು ವಿಷಕಂಠನಾದ
ಹರಹರ ಶಂಭೋ ಮಾದೇವ //೩//
ಭಕ್ತವತ್ಸಲ ಕರುಣಾಸಾಗರ
ಭಕುತರಿಗೊಲಿವ ಮಾದೇವ
ರಾವಣಗೆ ತನ್ನ ಆತ್ಮಲಿಂಗವನ್ನೇ
ದಾನವ ಮಾಡಿದ ಮಾದೇವ //೪//
ಜಠದಾರಿ ಕೈಲಾಸವಾಸಿ
ಪಂಚಲಿಂಗೇಶ್ವರ ಮಾದೇವ...
ನಮ್ಮಯ ಪಾಪವ ಕಳೆದು ತೊಳೆಯೋ
ಭಕುತರ ಬಂಧು ಮಾದೇವ//೫//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ