ಸೋಮವಾರ, ಫೆಬ್ರವರಿ 19, 2018

121. ಕವನ-ಬಾಳ ಬಂಡಿ

ಕವನ-ಬಾಳ ಬಂಡಿ

ನಮ್ಮ ಬಾಳು ನಿತ್ಯ ಪಯಣ
ಓಡುತಿರುವ ರೈಲ ಯಾಣ
ಮುಟ್ಟುವೆವು ಹಲವು  ತಾಣ
ಹಾಡುವೆವು ನಿತ್ಯ ಜೀವ ಗಾನ//

ಬಾಳಬಂಡಿ ನೂಕಬೇಕು
ಬರುವ ಕಷ್ಟ ಸಹಿಸ ಬೇಕು
ಸುಖವ ನೆನೆದು ಕುಣಿಯಬೇಕು
ನಾಳೆ ಚೆನ್ನಾಗಿದೆಯೆನುತ ಬಾಳಬೇಕು//

ಬದುಕ ಬಂಡಿ ಎಳೆಯುತ್ತಲಿ
ವಿವಿಧ ಜನರ ಕೂಡುತ್ತಲಿ
ನಮ್ಮ ಕಾರ್ಯ ಮೂಡುತ್ತಲಿ
ಕನಸ ಮಹಲು ಕಟ್ಟುತ್ತಲಿ//

ಮನದ ಬಯಕೆ ಅದುಮಿ ಇಟ್ಟು
ಸಿಕ್ಕಿದರಲ್ಲಿ ತೃಪ್ತಿಪಟ್ಟು
ನಾಳೆಗೆಂದು ಸ್ವಲ್ಪ ಇಟ್ಟು
ಬಾಳ ಬೇಕು ಕೋಪ-ಕಲಹ ಬಿಟ್ಟು//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ