ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಮುಂದಿನ ತಿಂಗಳು ಮಹಿಳೆಯರ ದಿನ ಬರಲಿದೆ. ಮಹಿಳೆಯರಾಗಿ ನಾವು ಮಾಡುವ ಸಾಧನೆಗಳು ಅನೇಕ. ಕುಟುಂಬದ ಜವಾಬ್ದಾರಿಗಳೊಂದಿಗೆ ಹೊರಗಿನ ದುಡಿತ ಅಲ್ಲದೇ ಸಮಾಜ ಸೇವೆ , ಸದಾ ಬ್ಯುಸಿ ಜೀವನಕ್ಕೆ ಒಗ್ಗಿ ಕೊಂಡ ನಾವು ನಮ್ಮದೇ ದಿನ ಬಂದಾಗ ಕುಟುಂಬದ ಆರೋಗ್ಯ ಕಾಪಾಡುವ ನಾವು ನಮ್ಮ ಬಗ್ಗೆ ಎಷ್ಟು ಕೇರ್ ಮಾಡಿಕೊಳ್ಳುತ್ತೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು.
ನನ್ನ ಮನೆ, ನಮ್ಮ ಮಕ್ಕಳು, ನನ್ನ ಸಂಸಾರದಲ್ಲೆ ಮುಳುಗದೆ, ನಾನು, ನನ್ನ ಸಾಧನೆ ಕಡೆಗೂ ಸ್ವಲ್ಪ ಗಮನ ಹರಿಸಬೇಕಾದುದು ಅತ್ಯಗತ್ಯ. ಅದರೊಂದಿಗೆ ನನ್ನ ಆರೋಗ್ಯ, ನನ್ನತನ, ಮುಂದಿನ ತಲೆಮಾರಿಗೆ, ರಾಜ್ಯ , ದೇಶಕ್ಕೆ ನನ್ನ ಕೊಡುಗೆ ಕೂಡಾ ಅತಿಮುಖ್ಯ.
ನೀವು ಈ ಭೂಮಿ ಮೇಲೆ ಬದುಕಿದ್ದೀರಿ ಎನ್ನುವುದಕ್ಕೆ ಮುಖ್ಯ ಪ್ರೂಫ್ ನಿಮ್ಮ ಈ- ಮೇಲ್ ಐಡಿ. ಅದೊಂದು ಇರಲಿ. ಇನ್ನೊಂದು ಫೇಸ್ ಬುಕ್ ಅಕೌಂಟ್. ಅದೂ ಇರಲಿ. ಸ್ಮಾರ್ಟ್ ಜಗತ್ತಿಗೆ ಸ್ವಲ್ಪ ಸ್ಮಾರ್ಟ್ ಆಗಲು ಕಲಿಯಿರಿ. ಯಾರಿಗೂ ಸಮಯ ಇಲ್ಲ! ಎಲ್ಲರಿಗೂ ಸಿಗುವುದು ದಿನದಲ್ಲಿ ಇಪ್ಪತ್ತ ನಾಲ್ಕು ಗಂಟೆಗಳು ಮಾತ್ರ ನೆನಪಿರಲಿ!
ಸಾಧನೆಯ ಪ್ರತಿ ಹೆಜ್ಜೆಯೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗುವುದಲ್ಲವೇ? ಮೊದಲು ನಮ್ಮ ಪ್ರಯಾಣವನ್ನು ಪ್ರಾರಂಭಿಸೋಣ.
ದೊಡ್ಡ ಸಾಧನೆ ಅಲ್ಲದಿದ್ದರೂ ಸಮಾಜಕ್ಕೆ ಸಹಾಯವಾಗುವ ಸಣ್ಣ ಪುಟ್ಟ ಕಾರ್ಯ ಮಾಡೋಣ. ಯಾರು ಗುರುತಿಸದೆ ಹೋದರೂ ಪರವೀಗಿಲ್ಲ, ನಮ್ಮ ಆತ್ಮತೃಪ್ತಿ ನಮಗಿರುತ್ತದಲ್ಲವೇ?ನೀವೇನಂತೀರಿ?
@ಪ್ರೇಮ್@
ಗುರುವಾರ, ಫೆಬ್ರವರಿ 1, 2018
97. ಅಂಕಣ ಬರಹ -ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-11
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ