1. ವಿರಹದ ಸಂಕಟ
ಭುವಿ ಬಾನ ಸಂಗಮದಿ
ರವಿಯ ಪಾತ್ರವು ಹಿರಿದು..
ಬಾನು ತಂಪಾಗಲು
ಭುವಿಯ ನೀರು ಇಂಗಬೇಕು...
ರವಿ ಬಿಸಿಲೂಡಲೂ ಬೇಕು..
ಆದರೇಕೋ....
ಭಾನು ಬರುವನು ಉರಿಯ ತರುವನು..
ನೀರಿಂಗಿಸುವನು..
ಆದರೆ....
ಮಾನವನೆಂಬ ಮೃಗದ
ಕರಾಳ ಹಸ್ತ...
ನೀರು ಬರೀ
ನೀರಾಗಿ ಉಳಿದಿಲ್ಲ...
ನೀರು ವಿಷವಾಗಿದೆ...
ಭೂಮಿ ಬಾನಿಗೆ
ವಿರಹ ಶುರುವಾಗಿದೆ...
ಭುವಿ ತಣಿಯಲಾರಳು..
ರವಿಯಿದ್ದರೂ..
ಬಾನು ತಣಿಸಲಾರ...
ನೀರಿಲ್ಲ, ಬೆಳೆಯಿಲ್ಲ..
ಇದ್ದರೂ ವಿಷವಿಹುದಲ್ಲ..
ಆಮ್ಲಮಳೆ!
ಹೊರಲಾರಳು ಇಳೆ
ಮಾನವರ ಕೊಳೆ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ