ಕವನ-ಮಾನವ ಏಕೆ ಹೀಗಾದೆ ನೀ..
ನನ್ನ ಕೈ ಕಾಲುಗಳ ಕಡಿದು
ಮುಂಡವ ಮೊಟಕುಗೊಳಿಸಿಹೆ ನೀ..
ನನ್ನ ಹೃದಯಕ್ಕೆ ಕೊಳ್ಳಿ ಇಟ್ಟು ಆ ಸ್ಥಳದಿ,
ರಸ್ತೆಗಳ ನಿರ್ಮಿಸಿ ನಲಿದವ ನೀನು...
ನನ್ನನ್ನೇ ಕತ್ತರಿಸಿ,ನಿನ್ನ ಮನೆಯ ಸುತ್ತ ಬೇಲಿ ಹಾಕಿದವ ನೀ..
ನನ್ನ ಆಹಾರದ ನೀರ ನದಿಗಳಿಗೆ
ವಿಷವೂಡಿಸಿದವ ನೀ..
ನನ್ನಸಿರ ಬಿಗಿಹಿಡಿದು ಕೊಟ್ಟೆ ನಿಮಗೆ
ಜೀವದುಸಿರನು ಕೊನೆವರೆಗೂ,
ಆ ಕೃತಜ್ಞತೆಗೆ ಕೃತಘ್ನನಾಗಿ,
ನನ್ನ ಉಳಿಸುವ ಬದಲು ಕೊಂದವ ನೀ...
ರಾಸಾಯನಿಕಗಳ ಬಳಸಿ, ಮಣ್ಣ ಸಾರವ ಅಳಿಸಿ,ಮಿತ್ರರನೆ ಕೊಲುವವ ನೀ..
ಕುಡಿವ ನೀರಿಗೆ, ಉಸಿರಾಡುವ ಗಾಳಿಗೆ,
ತಿನ್ನುವ ಉಣಿಸಿಗೆ ವಿಷವೂಡಿದವ ನೀ..
ಮಾನವನೆ ನೀ ಬದಲಾಗಲಾರೆಯಾ
ತನ್ನ ಕಾಲಿಗೆ ತಾನೇ ಕೊಡಲಿ ಹಾಕಿಕೊಂಡು?
ನನ್ನನ್ನು ಕೊಂದು ಬಾಳುವೆ ನೀ ಹೇಗೆ?
ಜೀವಿಗಳ ಉಳಿಸಿ,ಬೆಳೆಸು ನೀ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ