1. ತನ್ಮಯ
ಒಂದು ದಿನ
ಮಾವಿನ ಮರದ ಚಿಗುರೆಲೆ ನಡುವೆ
ಕೋಗಿಲೆ ಕುಳಿತು ಇಲ್ಲದೆ ಗೊಡವೆ,
ಹಾಡುತಲಿತ್ತು ತನ್ನದೆ ರಾಗದಲಿ
ಅದ ಕೇಳುತ ನಾ ತನ್ಮಯನಾದೆನಲಿ..
ಕುಹೂ ಕುಹೂ ಎನುವ
ಮಧುರ ರಾಗದಿ ಮನವ
ತುಂಬಿಹ ನೀ ಬಾನಾಡಿಯೆ ಕೇಳು
ನಮ್ಮಯ ಜನಕೆ ಬುದ್ಧಿಯ ಹೇಳು....
ಮರಗಳ ಕಡಿದು, ಕಾಡನು ಒಡೆದು
ನಾಡನು ಕಟ್ಟಿ, ಮಳೆಯನು ತಡೆದು
ನೀರೇ ಇಲ್ಲವೆಂದು ಹಾಹಾಕರಿಸುವ
ಮಾನವನಿಗೆ ದೇವ ತಾ ಬುದ್ಧಿಯ ಕಲಿಸುವ...
ಮನುಜರೆ ಕೇಳಿ, ಖಗವು ನಾನು
ತಿನ್ನುವೆ,ಹಾಡುವೆ ಜಗದಲಿ ತಾನು,
ಪರಿಸರ ಎಂದೂ ಬರಿದು ಮಾಡೆನು,
ಬದುಕಿ, ಇತರರ ಬದುಕಲು ಬಿಡುವೆನು...
ಕೋಗಿಲೆ ಮಾತ ಕೇಳಿ ನಾಚಿದೆ,
ಮಾನವನಾಗಿ ತಲೆ ತಗ್ಗಿಸಿದೆ!
ಪಶು-ಪಕ್ಷಿಗಳು ನಮಗಿಂತ ಮೇಲು,
ಪರಿಸರ ಹಾಳುಗೆಡಹುವ ಮನುಜ ಎಂದೆಂದೂ ಕೀಳು...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ