1. ಕವನ-ರಜೆ ಬಂತು
ಮತ್ತೆ ಬಂತು ಭಾನುವಾರ
ನಮಗೆ ರಜೆಯು ಇರುವ ವಾರ//ಪ//
ಆರು ದಿನ ಭರದ ಕೆಲಸದಿ
ನಿತ್ಯ ಕಾಯಕ ನಮ್ಮೀ ಜಗದಿ
ಬೇಸತ್ತು, ಬೆಂಡಾಗಿ ಬಳಲಿ ಮನದಿ
ರಜೆಗಾಗಿ ಕಾತರಿಸೆ ಸಂತೋಷದಿ
ಮತ್ತೆ ಬಂತು...//೧//
ರತ್ನದ ರವಿಯು ಉದಯಿಸೆ ಬಂತು
ರಜೆಯ ಮಜವನು ಹೊತ್ತು ತಂತು,
ಸಡಗರದಿ ಕಾದ ಸಮಯವು ಬಂತು,
ಸಮಯವ ಉಳಿಸೆ ಮನವನು ತಣಿಸೆ
ಮತ್ತೆ ಬಂತು...//೨//
ಹಿರಿಯರ ಕಿರಿಯರ ಬಯಕೆಯ ದಿನವು
ಮಕ್ಕಳಿಗೆಲ್ಲ ಕುಣಿಯುವ ದಿನವು
ಪಾಠವೆಲ್ಲ ಬದಿಗೊತ್ತಿ ನಲಿವ ಮನವು
ಖುಷಿಯ ತರುವ ವಾರದ ರಜವು
ಮತ್ತೆ ಬಂತು....//೩//
ರಂಗನು ತಂದ ವಾರದ ಕೊನೆಯು
ನೆಂಟರು-ಇಷ್ಟರು ಬರುವ ಗಳಿಗೆಯು
ಮದುವೆ-ಮುಂಜಿಗೆ ಹೊರಡುವ ಕ್ಷಣವು
ಪ್ರವಾಸ- ಪಿಕ್ ನಿಕ್ ತೆರಳುವ ದಿನವು
ಮತ್ತೆ ಬಂತು...//೪//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ