ಸೋಮವಾರ, ಫೆಬ್ರವರಿ 5, 2018

103. ಕವನ-ಕಳೆದು ಹೋದ ತಾಯಿ-ಮಗುವಿನ ಮನದಾಳ

1. ಅಳಲು

ನನ್ನಮ್ಮ ಎಲ್ಲಿರುವೆ?
ಕಾಣದೆ ಬಳಲಿರುವೆ,
ನಿನ್ನನ್ನು ಕಾಣಲು
ಹಂಬಲಿಸಿ ಕಾದಿರುವೆ...

ನನ್ನ ಕಂದ ಎಲ್ಹೋದೆ,
ನಿನ್ನ ಕಾಣದೆ ಬೆಂಡಾದೆ,
ನನ್ನ ಕರುಳ ಬಳ್ಳಿ
ನೀನಿರದೆ ನಾ ಹೇಗಿರಲಿ?

ನನ್ನವ್ವ ನಿನ್ನ ದನಿಯ
ಕೇಳದೇ ಬಳಲಿರುವೆ,
ಹಸಿರ ಕಾಣದ ನೆಲದಲಿ
ಹಸುವಿನಂದದಿ ಬಿದ್ದಿಹೆ..

ನಿನ್ನ ಕಾಣದೆ ಕಂದನೆ
ಊಟ ಸೇರದು ಉದರಕೆ,
ಬಂದು ನನ್ನನು ಸೇರಿಕೊ
ನನ್ನ ಒಂಟಿ ಮಾಡದೆ ನೋಡಿಕೋ...

ಅಮ್ಮ ಅಮ್ಮಾ ಎಲ್ಲಿರುವೆ
ನಿನಗಾಗೆ ನಾ ಕಾದಿರುವೆ,
ಕಂದ ನಿನ್ನದೆ ದಾರಿ ಕಾಯುವೆ
ನೀನಿಲ್ಲದೆ ನಾ ಒಂಟಿಯಾಗಿರುವೆ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ