1. ನೀನಿರಬೇಕಿತ್ತು (ಗಝಲ್)
ನನ್ನ ಮನದಂಗಳದಿ ನೀನಿರಬೇಕಿತ್ತು,
ನನ್ನ ಬಾಳ ಬಾಂದಳದಿ ನೀನಿರಬೇಕಿತ್ತು.
ನನ್ನ ಭಾವದ ಭಾವವಾಗಿ,
ನನ್ನೆದೆಯ ರಾಣಿಯಾಗಿ ನೀನಿರಬೇಕಿತ್ತು..
ನನ್ನರಸಿಯಾಗಿ, ನನ್ನ ಮಗುವಾಗಿ
ನನ್ನ ಕಣ್ಣ ಕಾಂತಿಯಾಗಿ ನೀನಿರಬೇಕಿತ್ತು..
ನನ್ನ ಬಳ್ಳಿಯ ಹೂವಾಗಿ
ನನ್ನವ್ವನ ಸೊಸೆಯಾಗಿ ನೀನಿರಬೇಕಿತ್ತು..
ವಿಧಿಯಾಟಕ್ಕೆ ಬಲಿಯಾಗದೆ
ಬದುಕಿನಾಟ ಮುಂದುವರೆಸಲು ನೀನಿರಬೇಕಿತ್ತು..
ಅತ್ತು ಕೆನ್ನೆ ರಂಗೇರಿಸುತ್ತಾ
ತುತ್ತು ಕೊಡಲು ನನಗೆ ನೀನಿರಬೇಕಿತ್ತು...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ