ಮಂಗಳವಾರ, ಫೆಬ್ರವರಿ 20, 2018

127. ಕವನ-ಅಮ್ಮಾ


*ಹೇಗೆ ಹೊಗಳಲಿ ನಿನ್ನ?*

ಅಮ್ಮ ನಿನ್ನ ಮುದ್ದು ಅಂದ!
ನಿನ್ನ ಒಡನೆ ನಾನು ಕಂದ!
ನಿನ್ನ ಸಿಹಿಮುತ್ತು ಎನಿತು ಚಂದ
ಎತ್ತಿಕೊಳಲು ನೀ ಏನೋ ಆನಂದ//

ಕೈ ತುತ್ತು ನಾ ಬೇಕು ಎನುವೆ,
ತಾಳ್ಮೆ ನೀನು ಕಲಿಸಿ ಕೊಡುವೆ,
ನಮನ ನನ್ನ ಮೊದಲ ಗುರುವೆ,
ನನ್ನೆ ನಾನು ನಿನಗೆ ಕೊಡುವೆ! //

ನಿನ್ನ ಪಾಠದಾಟ ಚೆನ್ನ,
ಹೆತ್ತು-ಹೊತ್ತು ಬೆಳೆನಿದೆನ್ನ!
ಬುದ್ಧಿ ಕಲಿಸಿ ಸಲಹಿದೆನ್ನ!
ಹೇಗೆ ತೀರಿಸಲಿ ಋಣವ ನಿನ್ನ? //

ನಿನ್ನ ಎದುರು ಎಲ್ಲ ಶೂನ್ಯ!
ಬದುಕಿನಲ್ಲಿ ನೀನೆ ಮಾನ್ಯ,
ನಿನ್ನಿಂದಲೆ ನಾನು ಜನ್ಯ
ನಿನ್ನ ಪಡೆದ ನಾನೇ ಧನ್ಯ!//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ