ಶುಕ್ರವಾರ, ಫೆಬ್ರವರಿ 2, 2018

98. ಕವನ- ನನ್ನ ಭಾವಕ್ಕೆ


ಭಾವನೆಗಳ ಭರಪೂರದಿ
ಭರಿಸಿಹ ಭಾವವೇ,
ಭಾವೈಕ್ಯತೆ ಭಾವನೆಯ
ಭಾವಿಸೆನ್ನ ಭವದಿ!

ಭೋರ್ಗರೆಯುವ ಶರಧಿಯಂದದಿ
ಭರವುಕ್ಕಿಸಿ ಹರಿದು,
ಭಾವಗಳ ಮೈದುಂಬಿಸಿ
ಭವ್ಯತೆಯ ಮೆರೆದು!

ಭೈರವಿಯ ಸ್ತುತಿಸುತ್ತಾ
ಭಜನೆಯನು ಮಾಡುತ್ತಾ,
ಭಾರತದ ಕೀರ್ತಿಯನು
ಭೀಮನಂತೆ ಸಾರುತ್ತಾ!

ಬೀಳಿಸದೆ ಜೀವನವ,
ಬಿರುಬಿಸಿಲಿಗೆ ಬೆಂಡಾಗಿಸದೆ,
ಬರಸಿಡಿಲಿನಾರ್ಭಟಕೆ
ಬಳಲಿ ಬೆಂಡಾಗದೆ!

ಭಯಂಕರಕೆ ಭಯಪಡದೆ,
ಭರವೇರು ಭಾವನೆಯೇ,
ಬರಗಾಲವೆ ಇಲ್ಲದೆಯೇ
ಬಾಳು ನೀ ನನ್ನ ಭಾವವೇ!
 
ಬಂಗಾರದ ಮನಸನ್ನು
ಬಂಜರು ಮಾಡದಿರೂ ನೀ
ಬಣ್ಣದ ಕನಸ ಬರಲಿ
ಬಂದ ಕನಸೆಲ್ಲವು
ಬಣ್ಣ ಬಣ್ಣದಿ ನಿಜವಾಗಲಿ!

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ