7.ಶಿವನೇ...
ಜಡೆಯಲ್ಲಿ ಗಂಗೆಯ ಬಂದಿಪ ದೇವನೆ
ಮುಡಿಯಲ್ಲಿ ಚಂದ್ರನ ಮುಡಿದಿಹ ಶಿವನೇ//
ಕೈಲಾಸವಾಸ, ಪರಮೇಶ, ಜಗದೀಶ ಶಶಿಧರನೇ,
ವಿಷವನು ಉಂಡ ಶ್ರೀ ಕಂಠೇಶ್ವರ, ದೇವನೆ//
ಸೀರೆಯನುಟ್ಟು ನೀರೆಗೆ ಗೌರವವಿರಿಸಿದ ಅರ್ಧನಾರೀಶ್ವರನೇ,
ನಲಿಯುತ ನೃತ್ಯಕೆ ತಿಲಕವನಿಟ್ಟ ನಟರಾಜನೇ//
ಉರಗವ ಕೊರಳಲಿ ಸುತ್ತಿ ಪ್ರಾಣಿ ಹಿಂಸೆ ತಡೆದ ಹರನೇ,
ಮುಡಿಯಲಿ ಚಂದ್ರನ ಮುಡಿದಿಹ ಗಂಗಾಧರನೇ//
ಗಜಚರ್ಮಾಂಬರಧಾರಿ ತಪ್ಪಸ್ಸಿನ ಹರಿಕಾರಿ
ಹರಹರ ಎನಲು ಹರಸುವ ಸುವಿಹಾರಿ//
ಗೌರಿಯ ಎದೆಯಲಿ ಇರಿಸಿದ ಮಂಜುನಾಥನೆ,
ನೆನೆದವರ ಕಷ್ಟ ನಿವಾರಕ ಜಗದೀಶನೆ//
ಢಂ ಢಂ ಢಮರುಗ ನಾದವಗೈಯುವ ಪರಮೇಶ್ವರನೇ,
ಗಣಪನ ರಾವಣನ ಬಳಿ ಬಾಲಕ ರೂಪದಿ ಕಳಿಸಿದ ಹರನೇ //
ರಾವಣಗಾತ್ಮಲಿಂಗವ ಕರುಣಿಸಿದ ಭಕ್ತರ ಪ್ರಿಯನೇ,
ಭೂಮಿಯ ಮೇಲೆ ಲಿಂಗವನಿಟ್ಟ ಗೋಕರ್ಣನಾಥೇಶ್ವರನೇ//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ