1. ನನ್ನೆ ನಾ ಮರೆತೆ
ಬಿರುಬಿಸಿಲ ಓಡಿಸಿ
ತಣ್ಣನೆಯ ತಂಗಾಳಿ..
ಮೈಯೆಲ್ಲ ಪುಳಕ
ಪ್ರಿಯೆ ನಿನ್ನ ನೆನಪಲ್ಲಿ...
ದುಂಬಿಯ ಝೇಂಕಾರ
ಪಕ್ಕಿಗಳ ಕಲರವ
ಓಡಲು ಮನೆಗೆ
ಸೇರಲು ಗೂಡಿಗೆ..
ಮನವೆಲ್ಲ ಬಲು ಭಾರ
ಆದರೂ ಆಹ್ಲಾದ,
ನೀನಿಲ್ಲ, ಬಳೆ ನಾದವಿಲ್ಲ
ನಿನ್ನ ನೆನಪಿದೆಯಲ್ಲ..
ಹಿತವಾದ ಸಂಗೀತ
ಮುದನೀಡೊ ಸಂತಸ
ಪದಪೂರಣ ಸಂಭ್ರಮ,
ಕವನ ಸಾಲ ಆಗಮ...
ತಂಗಾಳಿಯ ಆರತಿಗೆ
ವೇಣುಸಂಗೀತದ ಅಭಿಷೇಕ
ನನ್ನ ಬಾಳ ಮುಸ್ಸಂಜೆಗೆ
ನಿನ್ನ ನೆನಪೆ ಅನವರತ....
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ