ಗುರುವಾರ, ಫೆಬ್ರವರಿ 22, 2018

130. ಕವನ-ಹನಿಹನಿ ಇಬ್ಬನಿ

*ಹನಿಯಲಿ ನೇಸರನ ಸೊಬಗು*

ನೇಸರನ ಗುಣಗಾನ
ಇಂದು ಹನಿಹನಿಯಲಿ..
ಮೊಬೈಲೊಂದು ಸಾಲದು
ತುಂಬಿಕೊಳ್ಳಲು ಜಗದಲಿ...

ಹೃದಯವೆ ಸಾಲದು
ಭಾವನೆಗಳ ಭರದಲಿ!
ಪದಗಳೇ ಸಾಲವು
ಬರೆಯಲು ಚಾವಡಿಯಲಿ..

ಮನ ತುಂಬಿಹುದು
ಖುಷಿ ತಂದಿಹುದು
ಭಾವ ಬಿರಿದಿಹುದು
ಕಣ್ಣು ನಲಿಯುತಿಹುದು..

ಹನಿ ಸಾಗರವಾಗಿಹುದು
ಪದ ಪರ್ವತವಾಗಿಹುದು
ಭಾವದ ಕಟ್ಟೆಯೊಡೆದಿಹುದು
ಶಬ್ದಗಳ ಮೂಟೆ ಕಟ್ಟಿಹುದು...

ನೇಸರ ನಾಚಿಕೆಯಿಂದಲಿ
ಸಮುದ್ರದೊಳಗಂದದಲಿ
ಮುಳುಗಿ ಹೋಗುವುದರಲಿ
ಕವನದಂತ್ಯ ಹನಿಯಲಿ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ