ಮಂಗಳವಾರ, ಏಪ್ರಿಲ್ 10, 2018

240. ಕವನ-ಕೋಪ

ಕೋಪ ಬಿಟ್ಟು ಬಾರೆ ಬಳಿಗೆ

ನಿನ್ನರಸನ ನೋಡೇ ಒಮ್ಮೆ
ತಾಳಲಾರೆನು ಮೌನ ಸುಮ್ನೆ
ನನ್ನರಸಿಯೆ ಏಕೆ ಮುನಿಸು
ಕೋಪ ಬಿಟ್ಟು ಬಾರೆ ಬಳಿಗೆ..//ನಿನ್ನ//

ಕಾಲಂದುಗೆ ತೊಡಿಸುವೆ ನಿನಗೆ
ಕೈ ಬಳೆಯು ಬೇಡವೆ ಕೈಗೆ
ಮುದ್ದಾಡುವೆ ಬಾರೆ ಬಳಿಗೆ
ಈ ಕೃಷ್ಣನ ಸೇರೇ ಜೊತೆಗೆ....//ನಿನ್ನ//

ಬಾಡಿದೆ ಮುಖದ ಕಾಂತಿ
ನಲ್ಲೆಯೆ ಮನಸಿಗೇಕೆ ಭ್ರಾಂತಿ
ಬಾರೇ ನನ್ನ ಮನ ಶಾಂತಿ
ನಿನಗಾಗೆ ನನ್ನೀ ವಿನಂತಿ...//ನಿನ್ನ//

ಮೌನವು ಸಲ್ಲದು ಮಾತದು ಬೇಕಾದುದು
ನನ್ನಯ ಚೆಲುವೆಗೆ ಕೈ ಮುಗಿವೆ
ಮನ ಕರಗದೆ ಹಿತ ಕಾಣದೆ
ನನ್ನೊಳು ನಿನ್ನ ಮನ ನನ್ನ ಬಯಸದೆ...//ನಿನ್ನ//

ಸತ್ಯಭಾಮೆಯ ಉಸಿರಿದು ನನಗಾಗೆ
ಕೋಪತಾಪವೆಲ್ಲ ಯಾಕಾಗೆ
ನಾನಿರುವುದು ಎಂದೂ ನಿನಗಾಗೆ
ರಾತ್ರಿಯಲ್ಲು ಬರುವೆ ಕನಸಾಗೆ...//ನಿನ್ನ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ