ಸೋಮವಾರ, ಏಪ್ರಿಲ್ 30, 2018

278.ಕವನ-ಬುದ್ಧ

ಬುದ್ಧ

ಬದುಕಿನಲಿ ಆದ ಪ್ರಬುದ್ಧ
ಅವನೇ ನಮ್ಮ ನಾಡಿನ ಬುದ್ಧ
ಜಗವೆಲ್ಲಾ ಮಲಗಿದ್ದಾಗ ಅವ ಎದ್ದ
ಕಲಿತು ಬೋಧಿಸಿ ಎಲ್ಲರ ಮನಗೆದ್ದ!

ಮನುಜರ ಸತ್ಯ ಪಥದತ್ತ ಕರೆದೊಯ್ದ
ಕಟುಕರಿಗೆ ನಿಜ ಜೀವನದರಿವು ಮೂಡಿಸಿದ
ಕಪಟ,ಮೋಸ ಒಳ್ಳೆಯದಲ್ಲವೆಂದು ಹೇಳಿದ
ಶಾಂತಿಯ ಸಂದೇಶ ಎಲ್ಲೆಡೆ ಸಾರಿದ!

ಹೊಸದಾದ ನುಡಿಗಳನು ಹೇಳಿ ಜನಮನ ಗೆದ್ದ
ಕಷ್ಟಗಳ ಎದುರಿಸಲು ಜನರ ಕರೆದ
ಎಂದೂ ಕಾಣದ ಕಷ್ಟಗಳ ಕಂಡಿದ್ದ
ಕಂಡ ದಿನವೇ ಸಂಬಂಧಗಳ ಬಿಟ್ಟೆದ್ದ!

ದೀರ್ಘ ತಪಸ್ಸಿಂದ ಪರಿಹಾರ ಪಡೆದ
ಅದನು ಜನತೆಗೆ ಸಮನಾಗಿ ಹಂಚಿದ
ಆಸೆಯೇ ದು:ಖಕ್ಕೆ ಮೂಲವೆಂದ
ಹಂಚಿ ತಿಂದು ಬದುಕಿರೆಂದು ತಿಳಿಸಿದ!!!

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ