1.ಬದುಕು
ಬದುಕು ಸುಖ-ದುಃಖಗಳ
ನಡುವಿನ ಸಂಧಾನ..
ಅಲ್ಲಿ ಬೇಕು ಸಹನೆ-ತ್ಯಾಗಗಳ
ಮಹಾನ್ ವರದಾನ!
ಸ್ವಾರ್ಥ, ಸಣ್ಣತನಗಳ
ಸಂಪೂರ್ಣ ಬಲಿದಾನ!!
2.ಸಹಾಯ
ಭೂಮಿ ಬಾನಿನ ಒಡನೆ
ಸಂಧಾನವಿಲ್ಲದೆ ರೈತ
ಬೆಳೆ ಹೇಗೆ ಬೆಳೆದಾನು?
ಇಳೆ ಸತ್ವಯುತ
ಮಣ್ಣೊದಗಿಸಿದರೆ
ಆಗಸ ನೀರುಣಿಸಬೇಕಲ್ಲವೇ?
ಬದುಕೂ ಹಾಗೆ
ಅವಲಂಬನೆ-ಸಹಾಯ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ