ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಪರೀಕ್ಷೆಗಳಾಗ್ಲೇ ಪ್ರಾರಂಭವಾಗಿ ಮುಗೀತಾ ಬಂತು. ಈ ಬ್ಯುಸಿಯಲ್ಲಿ ಬರೆಯಲಾಗಲಿಲ್ಲ. ಪರೀಕ್ಷೆ ಮುಗಿಸಿ ಮುಂದಿನ ತರಗತಿಗೆ ಹೋಗುವ ಖುಷಿ ಒಂದೆಡೆ ಆದ್ರೆ ಮುಂದೇನು ಎನ್ನುವ ಭಯ ಇನ್ನೊಂದೆಡೆ. ಪೋಷಕರ ಒತ್ತಾಯಕ್ಕೋ ಸಂಬಂಧಿಕರ ಮಾತಿಗೋ ಕಟ್ಟುಬಿದ್ದು ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳು ಸೈನ್ಸ್ ತೆಗೆದುಕೊಂಡು ಆಸಕ್ತಿಯಿಲ್ಲದೆ ಓದದೆ ಅಥವಾ ಜಸ್ಟ್ ಪಾಸಾಗಿ ಏನೋ ಆಗ ಹೊರಟವ ಏನೋ ಆದ ಉದಾಹರಣೆಗಳು ಸಾಕಷ್ಟಿವೆ. ಇಲ್ಲಿ ತಾಯಿ ತಾನೇ ಮೊದಲ ಗುರು?
ತನ್ನ ಮಗುವಿನ ಜೀವನಕ್ಕೆ ಭದ್ರ ಬುನಾದಿ ಹಾಕಿದವಳು ಅಮ್ಮ. ಅಮ್ಮನಿಗೆ ಗೊತ್ತು ಮಗುವಿನ ಸಾಮರ್ಥ್ಯ. ಯಾರೋ ಏನೋ ಹೇಳಿದರೆಂದು ತನ್ನ ಮಗುವನ್ನು ಇಷ್ಟವಿಲ್ಲದ ಕೂಪಕ್ಕೆ ದೂಡುವುದಕ್ಕಿಂತ ಗೊತ್ತಿರುವವರ ಬಳಿ ಕೇಳಿ ತಿಳಿದು ತನಗೇನು ಇಷ್ಟ ಆ ಓದಿಗೆ ಕಳುಹಿಸುವ ದೃಢ ನಿರ್ದಾರವನ್ನು ಅಮ್ಮ ಮಾಡಬೇಕು.
ಅದಕ್ಕೆ ತಾಯಂದಿರು ಕಲಿತವರಾಗಿರಬೇಕು, ಹೆಣ್ಣೊಂದು ಅಲ್ಲ, ಎಲ್ಲಾ ಹೆಣ್ಣು ಕಲಿತಿರಬೇಕು.ಕಲಿತು ಮಕ್ಕಳಿಗೆ ಕಲಿಸಿ, ತನ್ನ ಮಕ್ಕಳನ್ನು ಉತ್ತಮ ದಾರಿಗೆ ಕರೆದುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಬೇಕು.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ