ಶಾಯರಿಗಳು
1. ಮತ್ತೆ ಮತ್ತೆ
ಮಳೆ ಬಂತು
ಮಣ್ಣನೆಲ್ಲ
ಮೆಲ್ಲಮೆಲ್ಲನೆ
ಮೆತ್ತನೆಯಾಗಿ
ಮಾರ್ಪಡಿಸಿತು.
ಮೈದಾನವೆಲ್ಲ
ಮಿದುವಾಗಿ
ಮೈದುಂಬಿತು
ಮೇದಿನಿಯಂತು
ಮಳೆಯಿಂದಾಗಿ
ಮಿಂದು ಮಿಂದು
ಮುದಪಟ್ಟಳು..
ಮೈಮನಸು-
ಮನರಂಜಿಸಿತು.
ಮೋಹಕವಾದ
ಮೋಡದುಂಡೆ
ಮಳೆತರಿಸಿ
ಮರೆಯಾಯಿತು.!!!
ಮನಸೋಲ್ಲಾಸದಿ
ಮಹಾಜನತೆ
ಮಹಾದೇವಗೆ
ಮತ್ತೆಮತ್ತೆ
ಮಂಗಳಾರತಿ
ಮಾಡುತಿತ್ತು..
ಮಾತೆಯಂದದಿ
ಮಹಾದೇವನು
ಮೌನವಾಗೇ
ಮಳೆಯಿತ್ತನು!
ಮಳೆ
ಮಾತ್ರ
ಮೈದಳೆದು
ಮನಸೋ ಇಚ್ಛೆ
ಮೋಜಿಂದ
ಮರುಳಾಗಿ
ಮೇದಿನಿಯ
ಮೈಕಳೆಯ
ಮುದದಿಂದ
ಮುರಿಯುತ್ತಿತ್ತು!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ