ಭೂದಿನದ ಅಂಗವಾಗಿ
ಭುವಿಯು ನಾ
ಸುಡುವ ಸೂರ್ಯನಿಗೆ ಮೈಯ್ಯೊಡ್ಡಿ ರಕ್ಷಿಸುವೆ
ನನ್ನ ಕಂದಮ್ಮಗಳ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವೆ
ಗುಂಡಿಯಗೆದರೂ, ಗಿಡ ಮರ ಗುಡ್ಡ ಕಡಿದರೂ
ಸಹಿಸಿ,ನೋವು ನುಂಗಿ ಕ್ಷಮಿಸಿ ಬಿಡುವೆ...
ಮನುಜನೆಂಬ ಜೀವಿಯ ಕಾಟ ಬಹಳವಾಗಿದೆ
ವಿಷವ ಬೆರೆಸಿ,ಮಣ್ಣು-ಗಾಳಿ-ನೀರು ಹಾಳಾಗಿದೆ
ತನ್ನ ಪಾಡಿಗಾನು ಬದುಕಿ ಬಾಳುವುದ ಬಿಟ್ಟು
ಮರವ ಕಡಿದು ಪ್ರಾಣಿ ಕೊಂದು
ಜಗವ ಸರ್ವನಾಶ ಮಾಡಲನುವಾಗಿಹೆ
ಕೊಳಕು ಮಾಡೊ ಮನುಜಗೆ ಬುದ್ಧಿ ಹೇಳ ಬಂದಿಹೆ..
ತಾಯ ಕರುಳ ಬಳ್ಳಿ ಕತ್ತರಿಸಿ ಬಿಟ್ಟಿಹೆ
ಆದರೂ ತಾಯ ಮಮತೆ ತೋರಿ ಸಲಹುವೆ
ತಾನು ಬದುಕೆ ತಾಯ ಕೊಂದು
ತನ್ನೆದೆಗೆ ತಾನೆ ಮೆಟ್ಟಿ ಪರರ ತಿಂದು..
ಅತಿಬುದ್ಧಿ ಅಪಾಯಕಿಹುದು, ತನ್ನ ಬದುಕೆ ಕೊಂದುಕೊಳ್ಳೋದು
ಮನುಜ ತಾನು ತಿಳಿದು ಕೂಡ ತಪ್ಪೆಸಗೋದು
ಯಾರಿಗಾಗಿ ಮಳೆ ನೆಲ ಬೆಳೆ ಜಲ ಉಳಿಸಬೇಕು
ನಿಮ್ಮ ಮಕ್ಕಳಿಗಲ್ಲವೇ?ಅಟ್ಟಹಾಸದಿಂದ ಮೆರೆಯಹೋದಿರಲ್ಲವೇ?
ಬೆಳೆಸಿ ಗಿಡವ,ಉಳಿಸಿ ಮರವ ಮುಂದಿನ ಪೀಳಿಗೆಗೆ
ಗಾಳಿ ಬೇಕು ನೀರು ಬೇಕು, ನಾಳಿನ ಬದುಕಿಗೆ
ತಿಳಿದು ತಿಳಿದು ತಪ್ಪು ಕೆಲಸ ಮಾಡಬೇಡಿ ಮಕ್ಕಳೆ
ಭೂಮಿ ನಾನು ಗುಡುಗಿದರೆ ಅಪಾಯವದು ಕುಡಿಗಳೆ!!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ