ಬುಧವಾರ, ಅಕ್ಟೋಬರ್ 31, 2018

560. ನ್ಯಾನೋ ಕತೆ- ಭಾಷಾಭಿಮಾನ

ಭಾಷಾಭಿಮಾನ

ಅವರು ಎದುರಾಳಿಗಳಾಗಿದ್ದು, ಚೆನ್ನಾಗಿ ಆಡುತ್ತಿದ್ದರೂ ಪಂದ್ಯದಲ್ಲಿ ಸೋತರು. ಕರ್ನಾಟಕ ತಂಡ ಗೆದ್ದಿತು. ಇದಕ್ಕೆ ಕಾರಣ ಕನ್ನಡ ಭಾಷೆ ಹಾಗೂ ಭಾಷಾಭಿಮಾನ.  ಕರ್ನಾಟಕ ತಂಡ ಮತ್ತು ಮಹಾರಾಷ್ಟ್ರ ತಂಡಗಳು ರಾಷ್ಟ್ರೀಯ ಖೋ ತಂಡದಲ್ಲಿ ಎದುರಾಳಿಗಳಾಗಿದ್ದರು. ದೆಹಲಿಯಲ್ಲಿ ನಡೆಯುತ್ತಿತ್ತು ಬಿರುಸಿನ ಪಂದ್ಯ. ಕನ್ನಡ ತನ್ನ ಕಿವಿಗೆ ಬೀಳುತ್ತಲೇ ಮಹಾರಾಷ್ಟ್ರದ ಟೀಮ್ ಲೀಡರ್, ಕ್ಯಾಪ್ಟನ್ ಮರಾಠಿ ಮರೆತ. ಅವನು ಮೂಲತ: ಕನ್ನಡಿಗನಾಗಿದ್ದ. ಎದುರಾಳಿ ತಂಡ ತನ್ನದೆಂಬಂತೆ ಭಾಸವಾಗಿ ಎಲ್ಲಾ ಆಟಗಳನ್ನೂ ತನ್ನ ಮಾತೃಭಾಷೆಗಾಗಿ ಸಮರ್ಪಿಸಿದ್ದ!!!
@ಪ್ರೇಮ್@

559. ನಮ್ಮ ಕನ್ನಡ

ನಮ್ಮ ಕನ್ನಡ

ನಲಿವಿನ ನೋವಿನ ಮಾತನು ಹೇಳಲು
ನೂಲಿದು ನಮ್ಮಯ ಕನ್ನಡವು..

ಕಷ್ಟವೊ ಸುಖವೋ ನುಡಿಯಿರಿ ಕನ್ನಡ
ಮಾತದು ಮುತ್ತಿನ ಹಾರವು..

ಸವಿನುಡಿ ನವನುಡಿ ಮುನ್ನುಡಿ ಹಿನ್ನುಡಿ
ನುಡಿ ನೀ ಕನ್ನಡ ಎಂದೆಂದೂ...

ಭುವನೇಶ್ವರಿ ತಾಯಿಯ ಹೆಮ್ಮೆಯ ಭಾಷೆಯು
ನಮನದ ನುಡಿ ಇದು ಕನ್ನಡವೂ..

ಸರ್ವಗೂ ಸುಲಭದಿ ಒಲಿಯುವ ಕನ್ನಡ
ನಾಡ ನುಡಿಯ ತೋರಣವೂ...

ಹಾ ಸವಿ ಕನ್ನಡ ನುಡಿಯಲು ಅಂದವು
ಬಾಳಲಿ ಬರುವುದು ಅಮ್ಮನ ನುಡಿಯೂ...
@ಪ್ರೇಮ್@

558. Me too

.ನನ್ನ ಕವನ

ನಾನೂ ಸಹ( ಮೀ ಟೂ)

ಇತರ ಭ್ರೂಣಗಳಂತೆ ಜೀವ ನಾನೂ ಸಹ
ಮನುಜರೇ ಕೊಲ್ಲುವಿರೇಕೆ ನನ್ನ ಜೀವಸಹಿತ..?

ಇತರ ಜೀವಿಗಳಂತೆಯೇ ಅಲ್ಲವೇ ನಾನೂ ಸಹ
ಕಡಿಯುವಿರೇಕೆ ನನ್ನ ಕೊಡಲಿಯಿಂದ ಭಾವರಹಿತ?

ಎಲ್ಲ ಮಾನವರಂತಲ್ಲವೇ ಹೆಣ್ಣು ನಾನೂ ಸಹ
ಬದುಕ ಬಿಡಲಾರಿರೇಕೆ ನನ್ನ ಭಯರಹಿತ?

ಭೂಮಿಗೆ ತಂಪನೀಯುವ ಚಂದಿರ, ಉಪಗ್ರಹ ನಾನೂ ಸಹ
ನನ್ನ ಮೇಲೇನು ಕೆಲಸ ನಿಮಗೆ ಉಪಗ್ರಹಸಹಿತ?

ಜಗಕೆ ಮಳೆ ತರುವ ಮೋಡವಲ್ಲವೆ ನಾನೂ ಸಹ..
ನಿಮ್ಮದೇನು ಸವಾರಿ ನನ್ನ ಮೇಲೂ ಅನವರತ?

ಸ್ವಂತ ಹೆತ್ತ, ಹೊತ್ತ ಮಾತೆಯಲ್ಲವೇ ನಾನೂ ಸಹ
ನನ್ನ ಮೇಲೇಕೆ ರೇಗಾಟ? ನಾ ಪ್ರೀತಿಸುವೆ ಸತತ...

ಹೊರಗೆ ಜನರೆದುರು ಮೆರೆವೆ ಸುಳ್ಳು ಹೇಳುತ ನೀನು ಸಹ
ಮನೆಯೊಳಗೆ ಮಳೆಯಂತೆ ಗುಡುಗು ಸಹಿತ...

ದಾನವನಾಗುತಲಿರುವೆ ನೀನು ಸಹ
ಮಾನವತೆಯ ಮೆರೆಯಬಾರದೆ ನೀತಿ- ಪ್ರೀತಿ ಸಹಿತ?
@ಪ್ರೇಮ್@

557. ಗಝಲ್-46

ಗಝಲ್

ಗೆಜ್ಜೆ ಕಟ್ಟಿ ನರ್ತಿಸಿ ಹೃದಯ ತಣಿಸುವ ಕಲೆಗಾರ ನಾನಲ್ಲ,
ತಬಲ, ವೀಣೆಯ ನುಡಿಸಿ ಜನಮನವ ಸೆಳೆವ ಕಲೆಗಾರ ನಾನಲ್ಲ!

ಹಣೆಗೆ ಬೈತಲೆಬೆಟ್ಟನಿಟ್ಟು, ಉದ್ದದ ಮಾಲೆ ಧರಿಸುವಂಥವನಲ್ಲ,
ಜರಿಜರಿ ಬಟ್ಟೆಯ ತೊಟ್ಟು, ಕಾಲಲಿ ಹೆಜ್ಜೆ ಹಾಕಿ ನರ್ತಿಸುವ ಕಲೆಗಾರ ನಾನಲ್ಲ..

ಸುಮಧುರ ಕಂಠದ ಗಾಯನ ಬರದೆನಗೆ,
ಬಣ್ಣಗಳ ಹದವಾಗಿ ಬಳಸಿ ಚಿತ್ರವ ಕುಂಚದಿ ಬಿಡಿಸುವ ಕಲೆಗಾರ ನಾನಲ್ಲ..

ಮಾತಿನಲ್ಲೆ ಸರ್ವರ ಹಿಡಿದಿಟ್ಟುಕೊಳ್ಳುವ ಶಕ್ತಿಯು ನನಗಿಲ್ಲ,
ಮೌನವೇ ಬಂಗಾರವೆನುತ,ಮನದಿ ಕನಸ ಕಾಣುವ ಕಲೆಗಾರ ನಾನಲ್ಲ..

ಪದಗಳಲಿ ಹಲವಾರು ಅರ್ಥ ಹುಡುಕಲಾರೆ ನಾನು,
ಭಾವನೆಗಳ ಭಾವದಿ ಬಿಂಬಿಸಿ ಹೊರಹೊಮ್ಮಿಸುವ ಕಲೆಗಾರ ನಾನಲ್ಲ..

ಹಾಡಲಾರೆ,ಕುಣಿಯಲಾರೆ, ನಟಿಸಿ ಜಗ ಮೆಚ್ಚಿಸಲಾರೆ.
ಅನೇಕ ಗುಣಗಳ ಮನುಜರ ನನ್ನೊಳಗೆ ಆಹ್ವಾನಿಸುವ ಕಲೆಗಾರ ನಾನಲ್ಲ...

ಪಕ್ವವಾಗಿಹ ಎದೆ ಗೂಡಿನಲಿ ಪಕ್ಷಿಯೊಂದನು ಬಚ್ಚಿಟ್ಟಂತೆ,
ಕಲೆಯು ಪ್ರೇಮದಿ ನನ್ನೊಡಲಲಿ ನಲೆಸಿದಂತಹ ಕಲೆಗಾರ ನಾನಲ್ಲ...
@ಪ್ರೇಮ್@

ಮಂಗಳವಾರ, ಅಕ್ಟೋಬರ್ 30, 2018

556. ಸಾಧ್ಯ-ಪನಿ

ಸಾಧ್ಯ

ಮನಸ್ ಮಲ್ತ್ಂಡ
ಬಂಡೆ ಕಲ್ಲ್ ನ್ ಲಾ ದೆರ್ಪೊಲಿಗೆ..
ಒಂಜಿ ಕಬಿತೆ ಪುಟ್ಟಂದಾ..
ಉಡಲ್ದ ಉಲಯಿಡ್ದ್?

@ಪ್ರೇಮ್@

555. ನ್ಯಾನೋ ಕತೆ-ವ್ಯತ್ಯಾಸ

ನ್ಯಾನೋ ಕತೆ

ವ್ಯತ್ಯಾಸ

ತುಂಬಾ ಸುಸ್ತಾಗಿ ಹೋಗಿದ್ದೆ, ಬಸ್ಸಿನ  ಪ್ರಯಾಣ ಆರೇಳು ಗಂಟೆಗಳ ಕಾಲ! ಅದೂ ಮಗುವನ್ನು ಹಿಡಿದುಕೊಂಡು ಹತ್ತಿ ಇಳಿದು ಸಾಕಾಗಿತ್ತು! ಛೆ!ಒಂದು ಕಾರು ಇರಬೇಕಿತ್ತು 'ಅಂದುಕೊಳ್ಳುತ್ತಿದ್ದೆ ಆಗಾಗ!
  ಕಾರು ಓಡಿಸಿ, ಮಾರ್ಗಕ್ಕೇ ಕಣ್ಣಿಟ್ಟು ಬೆಳಗ್ಗಿನಿಂದ ಸಂಜೆಯವರೆಗೆ ಸುಸ್ತಾಗಿದ್ದ ಅವನು! 'ಛೆ! ಯಾರಿಗೆ ಬೇಕಿದೆಲ್ಲ? ಬಸ್ಸಲ್ಲಿ ಆಗಿದ್ದಿದ್ದರೆ ನಿಧಾನಕ್ಕೆ ಆರಾಮವಾಗಿ ಮಕ್ಕಳೊಡನೆ ಕುಳಿತು ಆಟವಾಡುತ್ತಾ ನೆಮ್ಮದಿಯಿಂದ ಹೋಗಬಹುದಿತ್ತು' ಎಂದುಕೊಂಡ ಆತ!!!
@ಪ್ರೇಮ್@

554. ನ್ಯಾನೋ ಕತೆ-ಪ್ರೀತಿ

ಪ್ರೀತಿ

ರಾಮರಾಯರು ನಾಯಿಯೊಂದು ಸಾಕಿದ್ದರು. ಅವರೆಷ್ಟು ಅದನ್ನು ಪ್ರೀತಿಸುತ್ತಿದ್ದರೋ ಅವರ ಟಾಮಿಯೂ ಅವರನ್ನು ಅಷ್ಟೇ ಪ್ರೀತಿಸುತ್ತಲಿತ್ತು.
  ಅದೊಂದು ದಿನ ರಾಮರಾಯರು ತನ್ನ ವ್ಯವಹಾರದಲ್ಲಿ ಸೋತು, ತಲೆಕೆಟ್ಟು  ಊರಿಗೆ ಬರುವುದೇ ಇಲ್ಲ ಎಂದು ಮುಂಬೈ ಬಸ್ಸನ್ನೇರಿ ಹೋದವರು ಅಲ್ಲೇ ಕೆಲಸಕ್ಕೆ ಸೇರಿಕೊಂಡರು. ಅವರು ಹತ್ತಿದ ಬಸ್ ನಿಲ್ದಾಣದಲ್ಲಿ ಅವರನ್ನು ಕಾಯುತ್ತಾ ಕುಳಿತಿದ್ದ ಟಾಮಿ ಅನ್ನ ನೀರಿಲ್ಲದೆ ಒಂದು ವಾರ ಕಾದು ಕಾಣದ ಲೋಕಕ್ಕೆ ಹೋಯಿತು.

@ಪ್ರೇಮ್@

553.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-19

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-19

ನಾನೊಬ್ಬನೇ..ನನಗಾರೂ ಇಲ್ಲ, ನನ್ನ ಕಷ್ಟಗಳನ್ನು ಹಂಚಿಕೊಂಡು ನಿರಾಳವಾಗಿದ್ದು, ಅವಳೇ ನನ್ನ ಜೀವ ಎಂದುಕೊಂಡು ನನ್ನಿಡೀ ಬಾಳನ್ನು ಅವಳೊಂದಿಗೇ ಹಂಚಿಕೊಳ್ಳಬೇಕೆಂದು ಸಂತಸದಿ ಬದುಕಿದ್ದ ನನ್ನ ಬಾಳಲ್ಲಿ ವಿಧಿ ಬಿರುಗಾಳಿ ಎಬ್ಬಿಸಿ ಬಿಟ್ಟಿತಲ್ಲ.. ನನಗೆ ಬದುಕೇ ಬೇಡವೆನಿಸಿದೆ, ಪೂರ್ತಿ ಒಂಟಿ, ನಾನು ಸಾಯಬೇಕು.ಇಲ್ಲವೇ ಕುಡಿದು ಕುಡಿದು ಅವಳ ಮರೆಯಬೇಕು, ಹುಡುಗಿಯರೆಲ್ಲ ಕೆಟ್ಟವರು, ಯಾರನ್ನೂ ನಂಬಲೇ ಬಾರದು. ಇಡೀ ಕುಲವನ್ನೆ ಸಾಯಿಸಿ ಬಿಡಬೇಕು. ನಮ್ಮ ಜೀವನವನ್ನು ಆಟವಾಡುವ ಮೈದಾನ ಎಣಿಸಿಕೊಂಡಿದ್ದಾರಾ ಇವರು..? ಎಂದೆಲ್ಲ ಯೋಚನೆಗಳಾದಾಗ ಒಂದೇ ದೃಢ ನಿರ್ಧಾರ ತೆಗೆದುಕೊಳ್ಳುವ ಬದಲು ಯೋಚಿಸಿ, ಅವರ ಸ್ಥಾನದಲ್ಲೂ ತಾನೊಮ್ಮೆ ನಿಂತು ನೋಡಿದಾಗ ಸತ್ಯ ತಿಳಿಯುತ್ತದೆ.
  ಪ್ರತ್ಯಕ್ಷ ನೋಡಿದರೂ ಪರಾಂಬರಿಸಿ ನೋಡು ಎಂಬ ಒಂದು ಗಾದೆಯೇ  ಹೇಳುತ್ತದೆ... ಮತ್ತೊಮ್ಮೆ ನೋಡಲು! ಹೇಳಿದ್ದು, ನೋಡಿದ್ದು ಎರಡೂ ಸುಳ್ಳಾಗಬಹುದು. ಆದರೆ ನಮ್ಮ ಬುದ್ಧಿ ನಮ್ಮ ಕೈಯಲ್ಲೇ ಇರಬೇಕು. ನಮ್ಮ ಜೀವನ ನಮ್ಮದು ಅದನ್ನು ಬೇರೊಬ್ಬನ ಅಥವಾ ಬೇರೊಬ್ಬಳ ಕೈಗೆ ಆಳಲು ಕೊಡಬಾರದು. ನಾವೇ ರೂಪಿಸಿಕೊಂಡು ನಾವೇ ಆಳಬೇಕು ಅದನ್ನು. ಒಬ್ಬರಲ್ಲದಿದ್ದರೆ ಪ್ರಪಂಚದಲ್ಲಿ ಮತ್ತೊಬ್ಬರು ಸಂಗಾತಿಯಾಗಿ ಸಿಗುತ್ತಾರೆ. ಪ್ರಪಂಚದಲ್ಲಿ ಯಾವೊಂದು ವಸ್ತುವೂ, ಯಾವ ವ್ಯಕ್ತಿಯೂ ಶಾಶ್ವತವಲ್ಲ. ಬದುಕನ್ನು ಅದು ಬಂದಂತೆ ಸ್ವೀಕರಿಸಬೇಕು. ಬದಲಾಗಿ ಬದುಕಿಗೆ ಹೆದರಿ ಸಾಯುವುದಲ್ಲ.
   ಕಷ್ಟ ಸುಖಗಳನ್ನೆದುರಿಸಿ, ಮೆಟ್ಟಿ ನಿಂತು ಸಾವಿಗಂಜದೆ ಬದುಕಿ ತೋರಿಸಿದವನೇ ನಿಜವಾದ ಮನುಜ. ಸಾಯುವವನು ಹೇಡಿ. ಮನೆ, ಧನ ಎಲ್ಲ ಸುಟ್ಟು ಹೋದರೂ  ಧೈರ್ಯವಂತನು ಮತ್ತೆ ಕಟ್ಟಿ ಬದುಕುವುದಿಲ್ಲವೇ... ಮಳೆ ಬರದೆ ಬೆಳೆ ಸುಟ್ಟು ಹೋಗಿ ಸಾಲದ ಹೊರೆ ಹೊತ್ತ ರೈತರು ಅನೇಕರಿರುವರು. ಸಾಲಮನ್ನಾದಂತಹ ಅವಕಾಶಗಳು ಅವರಿಗೆ ಸಿಗುತ್ತವೆ. ಅದರ ಬದಲು ಸತ್ತರೆ, ಅವರ ಕುಟುಂಬಕ್ಕೆ ಯಾರು ಗತಿ?
   ತಾನೊಬ್ಬನೆ ಅಲ್ಲ, ಪ್ರಪಂಚದಲ್ಲಿ ಹಲವಾರು ಜನರಿಹರು. ಪ್ರೀತಿಯಲಿ ಸೋತವರೆಲ್ಲ ಸಾಯಲಾರರು, ಬದಲಾಗಿ ಹೊಸ ಜೀವನ ಕಟ್ಟಿಕೊಳ್ಳುವರು. ಜೀವನವನ್ನು ನರಕ ಮಾಡಿಕೊಳ್ಳುವುದು ನಾವೇ.. ನಮ್ಮನ್ನು ಎತ್ತರಕ್ಕೇರಿಸಿ ಕೊಳ್ಳುವುದೂ ನಾವೇ.. ನಮ್ಮ ಜೀವನ ಒಳ್ಳೆಯದು, ನಾಳೆ ನಮ್ಮನ್ನು ಜನ ಒಳ್ಳೆಯವರೆಂದು ನೆನಪಿಸ ಬೇಕು, ನಮ್ಮ ಕುಟುಂಬಕ್ಕೆ , ಸಮಾಜಕ್ಕೆ ನಾವೇ ಕಂಠಕರಾಗಬಾರದು, ನನ್ನ ಹೆಂಡತಿ, ಮಕ್ಕಳಿಗೆ, ತಂದೆ ತಾಯಿಯರಿಗೆ ನನ್ನ ಹೆಸರು ಹೇಳಲು ಹೇಸಿಗೆಯಾಗಬಾರದು, ಬದಲಾಗಿ ಹೆಮ್ಮೆಯೆನಿಸಬೇಕು  ಎಂಬ ಆಲೋಚನೆಗಳು ಮನದಲ್ಲಿದ್ದವರು ಮಾತ್ರ ಬದುಕಿನ ಗುರಿ ತಲುಪಿ ದಡ ಸೇರಲು ಸಾಧ್ಯ! ನೀವೇನಂತೀರಿ?
@ಪ್ರೇಮ್@

ಭಾನುವಾರ, ಅಕ್ಟೋಬರ್ 28, 2018

552. ಮೋಕೆದ ಪಾತೆರ

ಮೋಕೆದ ಪಾತೆರ

ಮನಸ್ ದಿಂಜಿ ಪ್ರೀತಿಗ್
ಉಡಲ್ ದಿಂಜಿದ್ ಪೋಂಡು..
ಆಸೆದ ಕಡಲ್ ಗ್ ಪದ
ಪೂರ ಮರೆತ್ ಪೋಂಡ್..

ಬದ್ ಕ್ ದ ದು:ಖ
ದೂರಾದ್ ಪೋಂಡು
ಉಡಲ್ ದ ಬೇಜಾರ್
ಮಾಜಿದ್ ಪೋಂಡು..

ಬಂಜಿದ ಬಡವು
ದೂರಾದ್ ಪೋಂಡು..
ಬಾಳ್ ದ ಖುಷಿಲಾ
ಹೆಚ್ಚಾದ್ ಪೋಂಡು...

ಮೋಕೆದ ಪಾತೆರ
ಮಾನಾದಿಗೆ ಕೊರುಂಡು..
ಮಟ್ಟೆಲ್ ದಿಂಜಾದ್
ಕಡಪಾಯಿಲೆಕ್ಕಾಂಡ್...

ಬಂಗಾರ್ದ ಮನಸ್
ಪೊಸ ಕನ ಕಟ್ಟಾಂಡ್
ತೆಲಿಕೆದ ಪಾತೆರ
ಸೊಲ್ಮೆನ್ ಸಂದಾಂಡ್...
@ಪ್ರೇಮ್@

552. ಮೋಕೆದ ಪಾತೆರ

ಮೋಕೆದ ಪಾತೆರ

ಮನಸ್ ದಿಂಜಿ ಪ್ರೀತಿಗ್
ಉಡಲ್ ದಿಂಜಿದ್ ಪೋಂಡು..
ಆಸೆದ ಕಡಲ್ ಗ್ ಪದ
ಪೂರ ಮರೆತ್ ಪೋಂಡ್..

ಬದ್ ಕ್ ದ ದು:ಖ
ದೂರಾದ್ ಪೋಂಡು
ಉಡಲ್ ದ ಬೇಜಾರ್
ಮಾಜಿದ್ ಪೋಂಡು..

ಬಂಜಿದ ಬಡವು
ದೂರಾದ್ ಪೋಂಡು..
ಬಾಳ್ ದ ಖುಷಿಲಾ
ಹೆಚ್ಚಾದ್ ಪೋಂಡು...

ಮೋಕೆದ ಪಾತೆರ
ಮಾನಾದಿಗೆ ಕೊರುಂಡು..
ಮಟ್ಟೆಲ್ ದಿಂಜಾದ್
ಕಡಪಾಯಿಲೆಕ್ಕಾಂಡ್...

ಬಂಗಾರ್ದ ಮನಸ್
ಪೊಸ ಕನ ಕಟ್ಟಾಂಡ್
ತೆಲಿಕೆದ ಪಾತೆರ
ಸೊಲ್ಮೆನ್ ಸಂದಾಂಡ್...
@ಪ್ರೇಮ್@

551. ಗಝಲ್ -45

ಗಝಲ್-45

ಗಿಡ,ಮರ-ಬಳ್ಳಿಯೊಡಲ ಮೌನವೇ ನನ್ನುಸಿರು..
ಹೂ, ಕಾಯಿ ಹಣ್ಣುಗಳ ಪರಿಮಳವೇ ನನ್ನುಸಿರು..

ನದಿ, ಕೆರೆ,ಕೊಳಗಳ  ಸ್ವಚ್ಛವಾದ
ನೀರಲೆಯ ರಭಸ,
ಒಣ ಎಲೆ, ಕಿರು ಮೊಗ್ಗು, ಮುಳ್ಳಿನ ತುದಿಯದುವೇ ನನ್ನುಸಿರು..

ಅತ್ತಿಯ ಹೂವು, ಗೇರು ಬೀಜ, ಪರಂಗಿ ಹಣ್ಣು..
ಕತ್ತಿಯ ತುದಿಯದು ಗಿಡಕೆ ತಾಗಿದಾಗ ಹೋಯಿತದುವೇ ನನ್ನುಸಿರು..

ಎಲೆ ತುದಿಯಲಿ ಜಾರಿ ಬೀಳಲು ಕಾದು ಕುಳಿತ ಹಿಮಬಿಂದು,
ಹೂವಿನೊಳಗಿರುವ ಚಿಟ್ಟೆ ಹೀರುವ ಸಿಹಿ ಮಕರಂದವೇ ನನ್ನುಸಿರು..

ಸಮಯಕ್ಕೆ ಬದಲಾಗುವ ಗೋಸುಂಬೆ, ಕಪ್ಪೆ,ಚಿಟ್ಟೆ
ಪರಿಸರಕೆ ತಕ್ಕನಾಗಿ ಬೆಳೆದಿಹ ಹುಳು ಹುಪ್ಪಟೆ, ಕೀಟಗಳ ಬಣ್ಣವದುವೇ ನನ್ನುಸಿರು..

ಕುಹೂ ಕುಹೂ ಕೋಗಿಲೆಯ ಗಾನದೊಳಗಿನ ಸ್ವರ,
ಹಕ್ಕಿಯ ಇಂಚರದ ಮೃದು ಮಧುರ ನಾದವೇ ನನ್ನುಸಿರು ...

ಪ್ರಕೃತಿ ಪ್ರೀತಿಯದು ಬದುಕಿನ ಅಂಗ
ಪ್ರೇಮದಿ ಗಿಡ ಮರಗಳ ಕಡಿಯದೆ ಉಳಿಸಿದರದುವೇ ನನ್ನುಸಿರು..
@ಪ್ರೇಮ್@

550. ತುಳು ಗಝಲ್

ಈರ್ ಬರ್ಪಿನಿ ಏಪ

ಕಾತೊಂದಿಪ್ಪುನ ಉಡಲ್ ನ್  ತಂಪು ಮಲ್ಪರೆ ಏಪ ಬರುವರ್?
ನಾಡೊಂದಿಪ್ಪುನ ಮನಸ್ ನ್ ದಿಂಜಾಯರೆ ಏಪ ಬರುವರ್?

ಬರ್ಸ ದಾಂತೆ ನುಂಗುದಿನ ಮಣ್ಣ್ ಗ್ ನೀರಾದ್ ಏಪ ಬರುವರ್?
ಇರೆ ಬೂರುದು ಬೋರಾಯಿನ ಮರಕ್ ಚಿಗುರಾಯರೆ ಏಪ ಬರುವರ್?

ಡಾಮರ್ ಪೋದು ಗುಂಡಿ ಬೂರ್ದಿನ ಮಾರ್ಗಗ್ ಸಿಮೆಂಟಾದ್ ,
ಕಟ್ಟಪುಣಿ ಉಡೆದ್ ಪೋಯಿನ ಕಂಡೊಗ್ ಮಣ್ಣಾಯರೆ ಏಪ ಬರುವರ್?

ಬಲೆತ್ತ ಉಲಾಯಿ ತಿಕ್ಕ್ ದ್ ವಿಲವಿಲ ಪನ್ಪಿನ ಮೀನ್ ಗ್
ಶಾಂತಿ ಕೊರ್ಪಿನ ಪನಿತ ಬರ್ಸಾಯರೆ ಏಪ ಬರುವರ್?

ಮನಸ್ ಖಾಲಿಯಾದ್ ಭಾವನೆ ಸೈತ್ ಪೋಯಿನ ಉಡಲ್ ಗ್
ವನಸ್ ಕೊರುದು ಎನ್ನ ಬದ್ ಕ್ ಗ್ ಶಕ್ತಿ ದಿಂಜಾಯರೆ ಏಪ ಬರುವರ್...?
@ಪ್ರೇಮ್@

549. ಗಝಲ್-44

ಗಝಲ್-44

ಕಾರಿರುಳ ಕಾರ್ಗತ್ತಲೆಯ ಕಮರಿದ ಬದುಕಿಗೆ ಬೆಳಕ ತಂದವನು ನನ್ನಿನಿಯ....
ಕಾರ್ಮೋಡ ಕಟ್ಟಿದ ಬಾಳಲಿ ಬಂದು ಮಳೆ ಸುರಿಸಿದವನು ನನ್ನಿನಿಯ...

ಕವಿತೆಯ ಗೂಡನು ಎದೆಯಲಿ ಕಟ್ಟಿದವನು,
ಮೊಟ್ಟೆಗಳನಿಟ್ಟು ಕಾವು ಕೊಟ್ಟವನು ನನ್ನಿನಿಯ...

ಕಾಡಿನ ಹಸಿರನು ಬದುಕಲಿ ನಿರ್ಮಿಸಿದವನು,
ತೋಟ ನಿರ್ಮಿಸಿ, ಆಟವಾಡಿದವನು ನನ್ನಿನಿಯ...

ವಸಂತ ಋತುವನು ಹುಡುಕುತ ತಂದನು..
ಗ್ರೀಷ್ಮದ ಕಳೆಯನು ಮನಕಿರಿಸಿದವನು ನನ್ನಿನಿಯ..

ಚಂದಿರನನ್ನು ಭೂಮಿಗೆ ಇಳಿಸಿ ನನ್ನೊಡನಾಡಿಸಿದವನು..
ಸೂರ್ಯನ ಬಿಸಿಯ ತಟ್ಟಲು ಬಿಡದವನು ನನ್ನಿನಿಯ..

ಒಂಟಿಯ ಬಾಳಿಗೆ ಜೋಡಿಯಾಗರಳಿದವನು..
ತಂಟೆಯ ಮಾಡುತ ಮನದಲೆ ನಿಂದವನು ನನ್ನಿನಿಯ...

ಬಾಳಿನ ಕ್ಷಣ ಕ್ಷಣದಲು ಪ್ರೀತಿಯ ಸುರಿದವನು...
ಪ್ರೇಮದ ಅಮೃತವ ದಿನದಿನ ಉಣಿಸುವವನು ನನ್ನಿನಿಯ...

@ಪ್ರೇಮ್@

ಗುರುವಾರ, ಅಕ್ಟೋಬರ್ 25, 2018

548.ಗಝಲ್-42

ಗಝಲ್-42

ಜಗದೊಳಗೆ ಅತಿಯಾದ ನೋವನನುಭವಿಸಿ ನಿನ್ನ ಭುವಿಗೆ ತಂದಿರುವುದನ್ನ ಮರೆತೆಯಾ..
ಎದೆ ಹಾಲ ಕುಡಿವಾಗಲೂ ಮಗುವಿಗೆ ನೋವಾಗದಿರಲೆಂದು ಮೆತ್ತಗೆ ಹಿಡಿಯುತ್ತಿದ್ದುದನ್ನ ಮರೆತೆಯಾ...

ಮನವೇಕೋ ಭಾರವಾಗಿದೆ ಭಾವನೆಗಳ ಕಟ್ಟೆಯೊಡೆದಿದೆ..
ಪುಸ್ತಕದ ಭಾರವನೂ ನಾನೇ ಹೊತ್ತು ನಿನ್ನ ಶಾಲೆಯವರೆಗೂ ಬಿಡುತ್ತಿದ್ದುದನ್ನ ಮರೆತೆಯಾ...

ಬಿಸಿ ಬಿಸಿ ಊಟವನೇ ನನ್ನ ಮಗನುನಲಿ ಎಂದೆಣಿಸಿಕೊಂಡಿದ್ದೆ.
ಪ್ರತಿದಿನ ಬಿಸಿ ಹೊಸರುಚಿಯನು ತಯಾರಿಸಿ ಶಾಲೆಗೋಡಿ ಬಂದು ನಿನಗೆ ತಿನಿಸಿದ್ದನ್ನ ಮರೆತೆಯಾ...

ನನಗೆ ಬಟ್ಟೆಯಿರದಿದ್ದರೂ ಮಗುವಿಗಿರಲೆಂದು ಹೊಸದನ್ನ ಕೊಂಡದ್ದು
ಹಣವಿರದಿದ್ದರೂ ಒಡವೆ ಅಡವಿಗಿಟ್ಟು ಕೇಳಿದ್ದ ಕೊಡಿಸಿದ್ದನ್ನ ಮರೆತೆಯಾ...

ಅಪ್ಪನೊಡನೆ ವಾಗ್ಯುದ್ಧ ನಿನಗಾಗಿ ಪ್ರತಿನಿತ್ಯ ಮಾಡಿದ್ದೆ
ನೀನೇ ಸರಿಯೆಂದು ವಾದಿಸುತಲಿ ನಿನ್ನ ಕಡೆಗೆ ಮಾತನಾಡಿದ್ದನ್ನ ಮರೆತೆಯಾ..

ಜ್ವರ ಬಂದು ಮಲಗಿರಲು ನಾ ನಿದ್ದೆಗೆಟ್ಟು ಚಡಪಡಿಸಿದ್ದೆ
ಊಟ ಬಿಟ್ಟು ಸಾವಿರ ದೇವರಲ್ಲಿ ನಿನಗಾಗಿ ಪ್ರಾರ್ಥಿಸಿ ಕಣ್ಣೀರು ಹಾಕಿದ್ದನ್ನ ಮರೆತೆಯಾ..

ಆಟವಾಡಿ ಬಿದ್ದು ಗಾಯಗೊಂಡು ಬಂದಿದ್ದೆ
ಪ್ರೀತಿಯುಕ್ಕಿ,ಕರುಣೆ ಬಂದು ಆಟವಾಡಿಸಿದ ಶಿಕ್ಷಕರ ದೂಷಿಸಿದ್ದನ್ನ ಮರೆತೆಯಾ..

ಮಗನೆಂಬ ಮೋಹದಿ ಬಂಧುಗಳ ಮನೆಗೂ ಕಡಿಮೆ ಹೋಗುತಲಿದ್ದೆ
ಜೀವಕ್ಕೆ ಜೀವಕೊಟ್ಟು ನಿನ್ನ ಸಾಕಿದ್ದನ್ನ ಮರೆತೆಯಾ..

ನನಗೇನೋ ವಯಸ್ಸಾಯಿತು, ಕಾಡು ಕರೆಯಿತು, ನಾಡು ದೂಡಿತು
ನಿನಗೂ ವಯಸ್ಸಾಗುತಲಿದೆ, ನಿನಗೂ ಮಗನಿರುವುದನ್ನ ಮರೆತೆಯಾ..

ನನ್ನೆಲ್ಲಾ ಪ್ರೀತಿಯನು ಧಾರೆಯೆರೆದು ಮೀಯಿಸಿ ನಿನಗೆ  ನೋವಾಗದಂತೆ ಬೆಳೆಸಿದ್ದೆ.
ನನ್ನ ಪ್ರೇಮವ ಪ್ರೀತಿ ಕೊಡುವವಳು ಬಂದಾಗ ಭಾಗಮಾಡಿದ್ದನ್ನು ಮರೆತೆಯಾ...

ನೀನಿಂದು ಹೊರಟಿರುವೆ ನನ್ನ ವೃದ್ಧಾಶ್ರಮದೆಡೆಗೆ ಬಿಡಲೆಂದು
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬುದನ್ನ ಮರೆತೆಯಾ..
@ಪ್ರೇಮ್@

547.ಗಝಲ್-43

ಗಝಲ್-42

ಮನುಜ ನಿನಗೆ ಶುದ್ಧ ಗಾಳಿ ಕೊಡುವೆ, ಗಿಡ ಮರವ ಕಡಿಯುವೆಯಾ..
ನಿನಗೆ ಕುಡಿಯೆ ಸ್ವಚ್ಛ ನೀರ ತರುವೆ, ನದಿಯ ತಳವ ಕದಡುವೆಯಾ..

ಬದುಕ ಕಟ್ಟಿಕೊಳ್ಳ ಬೇಕು ಎಂದು ನಿನಗೆ ತಿಳಿಸಿಕೊಟ್ಟೆ..
ಬೆಳೆಯ ಬೆಳೆಯೆ ಮಣ್ಣನಿಟ್ಟೆ, ತಂದು ವಿಷವ ಬೆರೆಸುವೆಯಾ..

ಭೂಮಿಯಲ್ಲಿ ಮೂರು ದಿನದ ಬಾಳು ನಿನಗೆ.. ಶಬ್ದ ಮಾಡಿ ಕಿವಿ ತಮಟೆಯೊಡೆದು,
ನಾಶ ಪಡಿಸಿ ಪಕ್ಷಿ ಸಂಕುಲವ ಸಾಯುವೆಯಾ....

ಪ್ರಾಣಿ ಸಂಕುಲವನೆಲ್ಲ ಬರಿದು ಮಾಡಿ, ಕೆಲವನ್ನು ನಾಶಮಾಡುವೆ...
ಅಳಿದುಳಿದುದ ತಿಂದು ತೇಗಿ ನೀನೊಬ್ಬನೆ ಭವವ ನಾಶಗೈಯ್ಯುವೆಯಾ...

ಮಾನ ಪ್ರಾಣ ಧನವನೆಲ್ಲ ತಿಂದು ತೇಗಿ, ಹತ್ಯೆಗೈದು ಜೀವವೆಲ್ಲ...
ತಾನೆ ಮೆರೆಯಬೇಕೆಂದು ಬಗೆದು ತನ್ನ ಪೀಳಿಗೆಯ ಮಗುವ ಕೊಲ್ಲುವೆಯಾ..

ಬದುಕೆ ಸಕಲ ಪ್ರೀತಿ -ಪ್ರೇಮ ಬೇಕು, ಪಕ್ಷಿ ಪ್ರಾಣಿ ಕೀಟ ಅರಿಯಬೇಕು..
ತಾನೆ  ತನ್ನದೆನುತ ಮೀರಿ ಬಾಳೆ ತನ್ನ   ಮನವ ತೊರೆಯುವೆಯಾ...

@ಪ್ರೇಮ್@

ಬುಧವಾರ, ಅಕ್ಟೋಬರ್ 24, 2018

546. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-18

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-18

ನವರಾತ್ರಿ ವೈಭವ ಮುಗಿದದ್ದಾಯ್ತು.  ಹಬ್ಬ ಮುಗಿದ ಬಳಿಕ ಮನೆಯಲ್ಲಿ ತೊಳೆಯುವ ಕೆಲಸವಾದರೆ ದೇವಾಲಯಗಳಲ್ಲಿ ಗುಡಿಸುವ ಕೆಲಸ. ನಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯುತ್ತೇವೆ. ಅವರು ಸುಮ್ಮನೆ ಕುಳಿತುಕೊಳ್ಳಲಾರರು. ಐಸ್ ಕ್ರೀಮ್, ಕೋಲ್ಡ್ ಡ್ರಿಂಕ್ಸ್, ಬಿಸ್ಕೆಟ್ಸ್, ಚಾಕ್ ಲೇಟ್ಸ್ ಬೇಕು ಅವರಿಗೆ ಆಗಾಗ. ಹಟಕ್ಕೆ ಬಿದ್ದೋ ತಡೆಯಲಾಗದೆಯೋ, ಇರಲಿ ಮಕ್ಕಳಲ್ವಾ ಎಂದೋ, ಪ್ರೀತಿಯಿಂದಲೋ ಕೊಡಿಸಿ ಬಿಡುತ್ತೇವೆ, ಅವರು ತಿಂದು ಉಳಿದ ಸಿಪ್ಪೆ, ಕವರು, ಐಸ್ ಕ್ರೀಮ್ ಕಪ್ ಗಳನ್ನು  ಬಿಸಾಕದೆ ಬ್ಯಾಗ್ನಲ್ಲಿ ಹಾಕಿ ಮನೆಗೆ ತೆಗೆದುಕೊಂಡು ಹೋಗಲಾದೀತೇ.. ಎರಡೆರಡು ಕೈಲೊಂದು, ಮಡಿಲಲ್ಲೊಂದು ಮಗುವನ್ನಿಟ್ಟುಕೊಂಡು ದೇವಸ್ಥಾನಕ್ಕೆ ಬರುವುದೇ ಹೆಚ್ಚು! ಇನ್ನು ಡಸ್ಟ್ ಬಿನ್ ಎಲ್ಲಿದೆ ಎಂದು ಆ ಮಕ್ಕಳನ್ನೆಳೆದುಕೊಂಡು ಹುಡುಕಿ ಹಾಕಲು ಸಾಧ್ಯವೇ..?
   "ಮೂರು ವರುಷದಲ್ಲಿ ಕಲಿತದ್ದು ನೂರು ವರುಷದವರೆಗೆ" ಎನ್ನುವ ಗಾದೆಯಿದೆ. ಹಲವಾರು ಅಮ್ಮಂದಿರನ್ನು, ಶಿಕ್ಷಕರನ್ನು, ಡಿಗ್ರಿ, ಡಬಲ್ ಡಿಗ್ರಿ ಆದ ತಾಯಂದಿರನ್ನು ಗಮನಿಸಿದ್ದೇನೆ, ತಿಂಡಿ, ಚಾಕ್ಲೇಟ್, ಬಿಸ್ಕೆಟ್ ತೆಗೆದು ಕೊಡುತ್ತಾರೆ ತಮ್ಮ ಮಕ್ಕಳಿಗೆ.. ಅನಂತರದ ಜವಾಬ್ದಾರಿಯನ್ನು ಮರೆತು ಬಿಡುತ್ತಾರೆ! ಇನ್ನು ಕೆಲವು ತಾಯಂದಿರು ತಾವೇ ಚಾಕಲೇಟಿನ ಪೇಪರ್ ಬಿಚ್ಚಿ ಸುಂದರ ಪರಿಸರವನ್ನು ಕಸದ ಡಬ್ಬಿಯಂತೆ ಉಪಯೋಗಿಸಿ ಕಂಡ ಕಂಡಲ್ಲಿ  ಸಿಕ್ಕ ಸಿಕ್ಕ ಕಸವನ್ನು ಬಿಸಾಡಿ ಬಿಡುತ್ತಾರೆ! ನೂಲಿನಂತೆ ಸೀರೆ..ಮಕ್ಕಳು ದೊಡ್ಡವರನ್ನು  ನೋಡಿಯೇ ಕಲಿಯುತ್ತಾರೆ! ಕಸವನ್ನು ಕಸದ ಬುಟ್ಟಿಗೇ ಹಾಕಬೇಕು ಕಂಡ ಕಂಡಲ್ಲಿ ಬಿಸಾಕಬಾರದು ಎಂದು ಎರಡನೇ ವರ್ಷದಿಂದಲೇ ಎಲ್ಲಾ ತಾಯಂದಿರೂ ತಮ್ಮ ತಮ್ಮ ಮಕ್ಕಳಿಗೆ ಹೇಳಿಕೊಟ್ಟು ತಾವೂ ಅದನ್ನು ಪಾಲಿಸಿದರೆ ಸಾಕು, ಭಾರತ ಸ್ವಚ್ಛ ಭಾರತವಾಗಿ ಬದಲಾಗುತ್ತದೆ! ಅದಕ್ಕೆ ಅಭಿಯಾನ ಬೇಕಿಲ್ಲ! ಇಂದಿನ ತಾಯಂದಿರಿಗೆ ಪುರುಸೊತ್ತಿಲ್ಲ ಅದನ್ನೆಲ್ಲ ತಮ್ಮ ಮಕ್ಕಳಿಗೆ ಕಲಿಸಲು! ಏಕೆಂದರೆ ಎಷ್ಟೋ ಮಕ್ಕಳು ತಮ್ಮ ಬಾಲ್ಯವನ್ನು ಕಳೆಯುವುದು ಅಜ್ಜಿ-ಅಜ್ಜನ ಜೊತೆಗೆ! ಅವರ ಮುದ್ದು ಹೆಚ್ಚಾಗಿ ಬುದ್ಧಿ ಮಾತೆಲ್ಲ ಮೂಲೆ ಸೇರಿರುತ್ತವೆ! ಇನ್ನು ಕೆಲವು ಮಕ್ಕಳು ನೆಂಟರಿಷ್ಟರ ಜೊತೆಗೆ... ಅವರು ಟೆಕ್ನಾಲಜಿ ಯುಗ ನೋಡಿ! ತಮ್ಮ ಮೊಬೈಲುಗಳಲ್ಲಿ ಬ್ಯುಸಿ.. ಮಕ್ಕಳನ್ನು ಗಮನಿಸುವುದು ಹೇಗೆ! ತಾನು, ತನ್ನ ಮನೆ ಬದಲಾಗದೆ ವಠಾರ, ಊರು ಬದಲಾಗದು, ಊರು ಬದಲಾಗದೆ ರಾಜ್ಯ, ದೇಶ ಬದಲಾಗದು. ಬದಲಾವಣೆ ತನ್ನಿಂದ, ನನ್ನಿಂದಲೇ ಪ್ರಾರಂಭವಾಗಬೇಕು, ಸ್ವಚ್ಛತೆ ಕೂಡಾ.. ನೀವೇನಂತೀರಿ?
@ಪ್ರೇಮ್@

545. ಗಝಲ್-39

ಗಝಲ್-39

ಮನವ ಕಲಕದೆ ಶುಚಿತ್ವ ಬೆಳಗುತ ಬರಲಿ ಮನದಿಂಗಿತ
ಕನಸು ಬೆದರದೆ ನೋವ ಮರೆಯುತ ಸಾಗಲಿ ಮನದಿಂಗಿತ..

ಭರವಸೆಯ ಕಿರಣವದು ಬದುಕ ಸಾಗಿಸುತ
ಬೆಳಗು ಬೆಳಗುತ ಬಾಳ ಪಯಣವ ಬೆಳಗಲಿ ಮನದಿಂಗಿತ..

ನಕ್ಕು ನಲಿದು ಪುಕ್ಕ ತೆರೆಯುತ
ಸುಕ್ಕುಗಟ್ಟದೆ ಸಿಕ್ಕು ಹರಿಯದೆ ಹಾರಲಿ ಮನದಿಂಗಿತ..

ಬೇಸರದುಸಿರು ಬಾರದೆ ಶಾಂತಿಯುದಕವು ಉಕ್ಕುತ
ಜೋಪಾನದಿ ಜೀವ ಕಾಯುತ ಸಹಾಯ ನೀಡಲಿ ಮನದಿಂಗಿತ..

ಬಾರದ ಲೋಕಕೆ ಸಾಗಲುಂಟು ಕಾಯೋದ್ಯಾಕೆ ಅನವರತ
ಬದುಕ ಕೊಂಡಿಯ ಗಟ್ಟಿಯಾಗಿ ಬೆಸೆದು ಹೋಗಲಿ ಮನದಿಂಗಿತ..

ಬಂದೆ ಬರುವುದು ಸಾವು ಖಚಿತ ತಿಳಿದು ಬದಲಾಗದಿರಲಿ
ಬರುವ ಅತಿಥಿಯ ಎದುರುಗೊಳ್ಳಲು ಕಾಯುತಿರಲಿ ಮನದಿಂಗಿತ..

ಹೃದಯದೊಳಗಡೆ ಪ್ರೀತಿಯಮೃತ ಉಕ್ಕಿ ಹರಿಯುತಲಿರಲು
ಮನದ ಭಾವನೆ ಪ್ರೇಮದಲಿ ಬೇರೆಯಾಗದಿರಲಿ ಮನದಿಂಗಿತ..

@ಪ್ರೇಮ್@

ಮಂಗಳವಾರ, ಅಕ್ಟೋಬರ್ 23, 2018

544. ಗಝಲ್ -41

ಗಝಲ್-41

ಭಾವವೆಲ್ಲ ಬತ್ತಿ ಬರಡಾದ ಬಾಳು ಒಂಟಿಯಾಗಿದೆ..
ಬಯಸಿ ಬಂದ ಒಲವು ಸಿಗದ ಬಾಳು ಒಂಟಿಯಾಗಿದೆ..

ಬಯಕೆ ಬರಲು ಬದುಕ ಬವಣೆ ಸಾಕೆಂದಾಗಿದೆ..
ಭಯದ ಬಂಧನ ಒದಗಿಸುತ್ತ ಬರಿದ ಬಾಳು ಒಂಟಿಯಾಗಿದೆ..

ಬಾಳಿಗೆಂದು ಬಂದ ಗೆಳತಿ ಹೃದಯ ಚೂರು ಮಾಡಿದೆ
ಬೇಡವೆಂದರೂ ನೆನಪು ಕಾಡಿದ ಬಾಳು ಒಂಟಿಯಾಗಿದೆ..

ನನ್ನದೆನುವ ಮನವು ಇಂದು ಪರರ ಸ್ವತ್ತಾಗಿದೆ..
ನಕ್ಕುನಗಿಸಿದಂಥ ಕ್ಷಣವ ನೆನೆದ ಬಾಳು ಒಂಟಿಯಾಗಿದೆ..

ಒಂಟಿ ಮರದ ಎಲೆಗಳೆಲ್ಲ ಉದುರಿದಂತಾಗಿದೆ..
ರೆಂಬೆ ಕಡಿದು ಸುಟ್ಟುಹೋದ ಬಾಳು ಒಂಟಿಯಾಗಿದೆ..

ಗಗನದಿಂದ ಉದುರಿ ಬಿದ್ದ ನಕ್ಷತ್ರದಂತೆ ಆಗಿದೆ..
ಬಿರಿದ ಹೂವು ನಕ್ಕು ನಲಿದು ಮುದುಡಿದ ಬಾಳು ಒಂಟಿಯಾಗಿದೆ..

ಮುದದಿ ಕಳೆದು, ಕೈಯ ಕೊಟ್ಟು ಭಾವ ಸತ್ತುಹೋಗಿದೆ
ಪ್ರೇಮದಿಂದ ಬಿರಿದ ಎದೆಯು ಕುಗ್ಗಿದ ಬಾಳು ಒಂಟಿಯಾಗಿದೆ..
@ಪ್ರೇಮ್@

ಸೋಮವಾರ, ಅಕ್ಟೋಬರ್ 22, 2018

543. ಗಝಲ್-40

ಗಝಲ್-40

ಬಿಟ್ಟು ಬಿಡಲಾರೆನೆಂದವ ಮತ್ಹೇಗೆ ಬಿಟ್ಹೋದೆ, ಬಾರೋ ಮತ್ತೊಮ್ಮೆ
ಮನದಿ ಕನಸುಗಳ ಮೂಟ್ಟೆಯ ಕಟ್ಟಿ ಬಿಚ್ಹೋದೆ, ಬಾರೋ ಮತ್ತೊಮ್ಮೆ..

ಮಾದಕ ನೋಟದಿ ಮನಸ ಕದ್ದು, ಹೃದಯ ಗೆದ್ದೆ
ಕದ್ದ ಹೃದಯವ ಹಿಂದಿರುಗಿಸಬಾರದೆ, ಬಾರೋ ಮತ್ತೊಮ್ಮೆ..

ಜೀವದ ಜೀವಕೆ ಜೀವವ ಕೊಟ್ಟು ಪಲಾಯನ ವಾದವೆ
ಜೀವವುಳಿಸೆ ನಿನ್ನಿರವು ಬೇಕಾಗಿದೆ, ಬಾರೋ ಮತ್ತೊಮ್ಮೆ..

ಎದೆ ಬಡಿತ ಕೇಳುತ್ತಿಲ್ಲವೆ ನಿನಗೆ, ಮನದ ತುಡಿತ
ಕಣ್ಣಲಿ ಕಣ್ಣನಿಟ್ಟು ಮಾತನಾಡುವುದಿದೆ, ಬಾರೋ ಮತ್ತೊಮ್ಮೆ..

ಒಂಟಿತನವ ಸಹಿಸಲಾರೆ,ನಿನ್ನ ಬಿಟ್ಟು ಬಾಳಲಾರೆ
ಹೊನ್ನ ಮಳೆಯ ಸುರಿಸಿ ಬಿತ್ತಬೇಕಾಗಿದೆ, ಬಾರೋ ಮತ್ತೊಮ್ಮೆ..

ಹೃದಯ ಬಡಿತ ಕೇಳುತಿದೆ, ಕಲ್ಲು ಕೊನರುತಿದೆ
ಪ್ರೇಮದಿಂದ ಬಾಳು ಬೆಳಗಬೇಕಾಗಿದೆ, ಬಾರೋ ಮತ್ತೊಮ್ಮೆ...

@ಪ್ರೇಮ್@

542.ಗಝಲ್-38

ಗಝಲ್-38

ಹಸಿರ ಕಾನನ ಗಿರಿಯ ಕಂದರ ಉಳಿಯಲಿ ನಮ್ಮಿಂದಲೇ
ವರುಣಾಗಮನ ಹಕ್ಕಿ ಕಲರವ ಬೆಳೆಯಲಿ ನಮ್ಮಿಂದಲೇ..

ಚಿಟ್ಟೆ ರವರವ ಪಟ್ಟೆ ಪ್ರಾಣಿಗಳ ಕೂಗು ಇಂಚರ
ಮಡಿಲ ಸೇರಿ ಗುರುತಾಗಲಿ ನಮ್ಮಿಂದಲೇ..

ಕಾಡ ಅಂದಕೆ ನಾಡ ಸೊಬಗದು ಸೇರಿ
ಪಕ್ಷಿ ಸಂಕುಲ ನಿತ್ಯ ಉಲಿಯಲಿ ನಮ್ಮಿಂದಲೇ..

ಪಚ್ಚೆ ಪರಿಸರ ಹಸಿರ ತೋರಣ ಶುದ್ಧ ಜಲವು
ಮಾನವತೆಯ ಮೂಕ ತೊಟ್ಟಿಲು ತೂಗುವಂತಾಗಲಿ ನಮ್ಮಿಂದಲೇ...

ನೇಸರನ ಹೊನ್ನ ಕಿರಣವು ಧರೆಗೆರ5 ಮುತ್ತನಿಕ್ಕಿದೆ
ಕಿರಣ ಜೀವಕೆ ವಿಷವಾಗದೆ ತಲುಪಲಿ ಜಗಕೆ ನಮ್ಮಿಂದಲೇ..

ಮರಗಳುದುರಿ ಹಾದಿ ಮಲಗಿದೆ,ನೆರಳು ಮಾಯವಾಗಿದೆ
ಅದನು ಪುನಃ ಪಡೆವ ಭಾಗ್ಯವು ಬರಲಿ ನಮ್ಮಿಂದಲೇ..

ಪ್ರೀತಿ ಪ್ರೇಮವು ದೂರವಾಗಿದೆ, ಹಣದ ದಾಹವು ಹೆಚ್ಚಿದೆ.
ಮುರಿದ ಮನಗಳು ಎಲ್ಲಾ ಮರೆತು ಒಂದುಗೂಡಲಿ ನಮ್ಮಿಂದಲೇ..
@ಪ್ರೇಮ್@

541. ಗಝಲ್-37

ಗಝಲ್-37

ಮನದನ್ನೆ ನಿನ್ನರಳಿದ ವದನವ ನೋಡದೆ ನಾ ಹೇಗಿರಲಿ..
ನನ್ನೊಲವೆ ನಿನಗೆ ಕೊಡಲಿರುವ ಸಿಹಿಮುತ್ತ ಕೊಡದೆ ನಾ ಹೇಗಿರಲಿ...

ನಿನ್ನ ನೋಡಿ ಮನತುಂಬಿ ಹೋಗಬೇಕೆಂದಿದ್ದೆ,
ಬರಿಗೈಲಿ ಹೋದ ಪಕೀರನಂತೆ ಮನ ಬೇಸರಿಸಿದೆ ನಾ ಹೇಗಿರಲಿ...

ಹುಸಿ ಮುನಿಸು ತುಸು ಕೋಪ ಚೆಲ್ಲುವ ಚೆಲುವೆ
ನೀ ಬರದೆ ಮುದ ನೀಡದೆ ನಾ ಹೇಗಿರಲಿ...

ವದನದಲಿ ನಗುವ ಬೆರೆಸುತ ನನ್ನ ನೋಡಬರಲೊಲ್ಲೆ
ವೀಣೆಯಂತೆ ಮನವ ಮೀಟಿದೆ,ನಾ ಹೇಗಿರಲಿ..

ಸೋನೆ ಮಳೆಯು ಬರುತಿಹುದು ಹದದಲಿ
ಸಿಹಿ ಮಳೆಯೆ ನನ್ನೆದೆಗೆ ನೀ ಉದುರದೆ ನಾ ಹೇಗಿರಲಿ...

ದೇವ ನಿನ್ನನು ನನಗಾಗಿ ಸೃಷ್ಟಿಸಿಹನು
ಅಡಗಿರುವೆ ಎಲ್ಲಿ, ನೀನಿರದೆ ನಾ ಹೇಗಿರಲಿ....

ನನ್ನೊಡಲ ಪ್ರೇಮವೇ ನನ್ನಾಸರೆಯ ಚಿಗುರೇ
ನನ್ನ ಬಳ್ಳಿಯ ಹೂವೇ ನೀ ಬರದೆ ನಾ ಹೇಗಿರಲಿ...
@ಪ್ರೇಮ್@

ಭಾನುವಾರ, ಅಕ್ಟೋಬರ್ 21, 2018

540. ಕಥಾ ಕಮ್ಮಟ-21.10.2018

ಮರೆಯಲಾರದ ಕಥಾ ಕಮ್ಮಟದ ಮಹಾನುಭವ

     ನಮ್ಮ ಬದುಕಿನ ಅಂದವಾದ ಗುರಿಯನ್ನು ಸರಿಯಾಗಿ ತಲುಪಬೇಕಾದರೆ ಬದುಕಿನಲ್ಲಿ ಬರುವ ಹಲವಾರು ತಿರುವುಗಳನ್ನು ನಾವು ಹೇಗಾದರೂ ದಾಟಲೇ ಬೇಕು.ಕೊಟ್ಟಿಗೆಹಾರದಿಂದ ಆಲೇಕಾನಿನ ತಿರುವುಗಳಲ್ಲಿ ಮೇಲೇರುತ್ತಾ ಚಲಿಸಿ, ಊಟಿಯನ್ನು ನೆನಪಿಸಿದ ಸೌಂದರ್ಯದ ಖನಿ ಆಲೇಕಾನನ್ನು ತಲುಪಿದಾಗ ನನಗನಿಸಿದ್ದು ಹೀಗೆ.  ಸುತ್ತಲೂ ಹಬ್ಬಿರುವ ಹಸಿರ ಗಿರಿಯ ನಡುವಿನ ಸುಂದರ ಕಣಿವೆ ಆಲೆಕಾನ್. ವಾವ್!! ಅಲ್ಲಿನ ಜನರ ಹೃದಯ ಬಂಗಾರ! ಅದೆಷ್ಟು ದಿನಗಳಿಂದ ತಯಾರಿ ನಡೆಸಿದ್ದರೋ..ನಾ ಕಾಣೆ..ನೃತ್ಯ, ಹಾಡು,ಕೋಲಾಟಕ್ಕೆ ಅಣಿಯಾಗುತ್ತಾ, ಜತೆ ಜತೆಗೂ ಪ್ರತಿ ಮನೆಯಲ್ಲೂ ಇದ್ದ ಹಳೆ ಕಾಲದ ವಸ್ತುಗಳನ್ನೆಲ್ಲಾ ಜೋಡಿಸಿ, ಅಂದವಾಗಿ ಹೆಸರು ಬರೆದು ಅಲಂಕರಿಸಿ ಇಟ್ಟ ಅಂದದ ಕೆಲಸ! ಪ್ರತಿಯೊಂದರಲ್ಲೂ ಅಚ್ಚುಕಟ್ಟುತನ! ಮೆಚ್ಚಿ ಮನದುಂಬಿ ಬಂತು..
   ಇಷ್ಟಕ್ಕೇ ಮುಗಿಯಲಿಲ್ಲ. ಆ ಊರಿನಲ್ಲಿ ಇರುವುದು ನಲವತ್ತೇ ಮನೆಗಳು. ಯಾವ ಮೊಬೈಲ್ ನೆಟ್ ವರ್ಕ್, 2ಜಿ,3ಜಿ, 4ಜಿಗಳ ಕಿರಿಕಿರಿ ಅವರಿಗಿಲ್ಲ. ಅಂದವಾದ ಮನೆಗಳಲ್ಲಿ ಅಚ್ಚುಕಟ್ಟುತನದೊಂದಿಗೆ ಬಂದ ಬಾಂಧವರನ್ನೆಲ್ಲ ತಮ್ಮ ಮನೆಗೆ ಬಂದ ನೆಂಟರೋಪಾದಿಯಲ್ಲಿ ಸತ್ಕರಿಸಿದ ಪರಿ ಹೇಳಸಾಧ್ಯ!  ಹಲವಾರು ದಿನಗಳಿಂದ ತೋಟದೊಳಗಿನಿಂದ ಬೈನೆ ಮರದ ದಿಂಡನ್ನು ತಂದು ಅದನ್ನು ಕತ್ತರಿಸಿ ರುಚಿಕರವಾದ ಪಲ್ಯ ತಯಾರಿಸಿ, ಗದ್ದೆ ಬದಿಯ ಕೆಸುವಿನ ಎಲೆಗಳನ್ನೆಲ್ಲ ಪ್ರೀತಿಯಿಂದ ಕಿತ್ತು ಗಂಟು ಕಟ್ಟಿ, ರುಚಿ ರುಚಿಯಾದ ಗಸಿ ಮಾಡಿ ಬಡಿಸುವಲ್ಲಿನ ಅವರ ತಾಳ್ಮೆಗೆ ಅವರಿಗವರೇ ಸಾಟಿ. ಹಳ್ಳಿಯ ಮುಗ್ದ ಮನಸಿನ ಪ್ರೇಮದ ಕಾಣಿಕೆ ಅದುವೇ...
    ಮತ್ತೊಂದೆಡೆ ನಮ್ಮ ಕತೆ ಬರೆಯುವ ಹಸಿವನ್ನು ತಣಿಸಲು ಅಡಿಯುಟ್ಟ ಶ್ರೀಪತಿ ಸರ್, ಅನಿತಾ ಮೇಡಂ, ಜೋಗಿ ಸರ್, ಶ್ಯಾಮ ಸುಂದರ್ ಸರ್ ..ವಾವ್..ಕತೆಯ ಬಗ್ಗೆ ಹಲವಾರು ಆಸೆ, ಕನಸನ್ನು ಹೊತ್ತು ಪಟ್ಟಣದಿಂದ ದೂರವಾದ ಆಲೆಕಾನಿಗೆ ಕಷ್ಟಪಟ್ಟು ಜೀಪಲ್ಲೋ, ಪಿಕಪ್ಪಲ್ಲೋ ಬಂದು ಸೇರಿಕೊಂಡ ಶಿಬಿರಾರ್ಥಿಗಳಿಗೆ ಕಥೆ ಬರಹದ ಒಂದೊಂದೇ ತುತ್ತನ್ನು ಸವಿಯಾಗಿ ತಾಳ್ಮೆಯಿಂದ ಉಣಬಡಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದ ಅತಿಥಿಗಳ ತಂಡ!
  ಮಗದೊಂದೆಡೆ ಕರ್ನಾಟಕದಾದ್ಯಂತ ಇರವ ಯುವ ಕತೆಗಾರರನ್ನು ಹೆಕ್ಕಿ ಹೆಕ್ಕಿ, ತಮ್ಮ ಊರಿನ ಬಗ್ಗೆ ತಿಳಿಸಿ, ಆಲೆಕಾನಿನ ಬಗ್ಗೆ ತಿಳಿಸಿ, ಅಲ್ಲಿ ೧೭ ವರುಷಗಳ ನಂತರ ತೇಜಸ್ವಿಯವರ ಹೆಸರಿನಲ್ಲಿ ಊರವರ ಸಹಕಾರದೊಂದಿಗೆ ಕಥಾ ಕಮ್ಮಟದ ಹೊರೆ ಹೊತ್ತು ಏರ್ಪಡಿಸಿದ ತಾಲೂಕಿನ ಕನ್ನಡ ಸಾಹಿತ್ಯ  ಪರಿಷತ್ತಿನ ಮೋಹನ್ ಶೆಟ್ಟಿ, ಗಣೇಶ ಮಗಲಮಕ್ಕಿ ನಂದೀಶ್ ಹಾಗೂ ಇತರರು, ಭಾಗವಹಿಸಿದ ಹಲವಾರು ಸ್ಥಳೀಯ ಪತ್ರಿಕೆಗಳ ಸಂಪಾದಕರು, ಆಗಾಗ ಮನರಂಜಿಸಿದ  ಹಾಡುಗಾರರು, ಊರ ಜನರ ನೃತ್ಯ ವೈಭವ.. ಆಹಾ..ಹೇಳ ತೀರದ ಆನಂದ..
   ಕತೆಗಾರನಿಗೆ ಅದೇನು ಬೇಕೋ ಮತ್ತೆ.. ಗುರಿ ತಲುಪಲು ಬದುಕಿನ ತಿರುವುಗಳನ್ನೆದುರಿಸಿ ಗುರಿಯೆಡೆಗೆ ಧಾವಿಸಿ ಅಂದದ ಗುರಿಯ ಸೇರುವ ಬದಲು!!
@ಪ್ರೇಮ್@

ಶನಿವಾರ, ಅಕ್ಟೋಬರ್ 20, 2018

539. ಗಝಲ್-35

ಗಝಲ್

ಸರ್ವರಿಗೂ ಕಂಪ ಸೂಸಲಿ  ನೀ ಮುಡಿದೀ ಮಲ್ಲಿಗೆ
ಸಕಲರಿಗೆ ತಂಪ ನೀಡಲಿ ನೀ ಮುಡಿದೀ ಮಲ್ಲಿಗೆ..

ಕರುನಾಡ ಕತ್ತಲಿನ ಅಂಧಕಾರ ಸರಿಸಲಿ
ಜಾತಿ ಮತಗಳ ಒದ್ದೋಡಿಸಲಿ ಪರಿಮಳದೀ ಮಲ್ಲಿಗೆ..

ಹಗಲಿರುಳು ತಣ್ಣನೆಯ ಚಳಿಯಲ್ಲಿ ನಡುಗುವರು
ದೇಶ ಕಾಯುವ ವೀರರವರ ಶೂರತೆಯ ಸಂಕೇತವದೀ ಮಲ್ಲಿಗೆ..

ದೇವಿಯರ ಪ್ರಿಯ ಗಾನವಿದೆ ಇದರೊಳು
ಮಾನಸಿಕ ಸಂತಸವೀಯುವುದೀ ಮಲ್ಲಿಗೆ..

ಬಿರುಬಿಸಿಲ ಬೆಂಗಾಡಿನಲೂ ಮಳೆ ತರಲಿ ಮೋಡಗಳು
ಅವುಗಳಿಗೆ ಶಕ್ತಿಯೀವ ಗುಣ ತರುವುದೀ ಮಲ್ಲಿಗೆ..

ಹೆಣ್ಣು ಮಗುವಿನ ಭ್ರೂಣ ಹತ್ಯೆಯದು ನಿಲ್ಲಲಿ..
ಹುಡುಗಿಯರ ಶಕ್ತಿ ಮೆರೆವುದೀ ಮಲ್ಲಿಗೆ...

ಪ್ರೀತಿಯಿಂದಲಿ ಪತಿಯು ತಂದು ಮುಡಿಸುವ ಮಡದಿಗೆ
ಅಮರ ಪ್ರೇಮದ ಕಾಣಿಕೆಯದೀ ಮಲ್ಲಿಗೆ...
@ಪ್ರೇಮ್@

538. ಎಸೆದು ಬಿಡೆನ್ನ

ಅಮ್ಮಾ ಎಸೆದು ಬಿಡೆನ್ನ...

ಅಮ್ಮಾ ಎಸೆದು ಬಿಡೆನ್ನ ಈ ಅಂಧಕಾರ ಕೂಪದಿಂದ..
ಇಲ್ಲಿ ನಿನ್ನ ಹೊರತು ನನಗಾರ ಮೇಲೆಯೂ ನಂಬಿಕೆಯಿಲ್ಲ..

ಹೆಣ್ಣಾಗಿ ಹುಟ್ಟಿರುವುದೇ ನನ್ನ ತಪ್ಪಾಗಿಹುದುದಿಲ್ಲಿ..
ಎಂಟು ತಿಂಗಳ ಹಸುಳೆಯನೂ ಮೋಹಿಸಿ ಸಾಯಿಸುವರಿಲ್ಲಿ..

ಎಸೆಯೆನ್ನ ಎದೆಯಲ್ಲಿ ರಕ್ತವಿರದ ಪಾಪಿಗಳ ಲೋಕದಿಂದ
ಎಸೆದು ಬಿಡೆನ್ನ ಕಣ್ಣಲ್ಲಿ ನರವಿಲ್ಲದವರ ನರಕದಿಂದ..

ದೈವೀ ಶಕ್ತಿಯ ಕೂಪದೊಳಗೆ ನಾ ಹೋಗಿ ಬೀಳುವಂತೆ,
ನಿನ್ನಂಥವರೇ ಅನೇಕಾನೇಕ  ಹೃದಯಗಳು ಅಲ್ಲಿರಬೇಕಂತೆ..

ನಿನ್ನ ಮುದ್ದಿನಲಿ ನಾ ಪ್ರಶಾಂತಳಾಗಿ ಬೆಳೆವ ನಂಬಿಕೆಯಿದೆ.
ನಿನ್ನನ್ನೂ ನೆಮ್ಮದಿಯಲಿ ಬದುಕಲು ಬಿಟ್ಟಾರೆಂಬ ಭರವಸೆಯಿಲ್ಲ..

ನನ್ನ ಈ ಜಂಜಡದ ಬದುಕಿಂದ ದೂರ ಅಟ್ಟಿಬಿಡಮ್ಮ..
ಎಸೆದು ಬಿಡಮ್ಮ ನನ್ನ ಶಾಂತಿಯ ಬೀಡಿನ ಕಡೆಗೆ...
@ಪ್ರೇಮ್@