ಬರಬಾರದೀ ಬದುಕು
ಕೆಟ್ಟವ, ಕೆಟ್ಟದು ಮಾಡಿದವ 'ಶನಿ'
ಹೆಂಡತಿ ಬೈದರದುವೇ 'ಮಂಗಳಾರತಿ'
ಪಕ್ಕದ ಮನೆಯವಳು ಜಗಳವಾಡಿದರೆ 'ಸಹಸ್ರ ನಾಮಾರ್ಚನೆ'
ಗಂಡ ಬಂದರೆ ಅವನಿಗೆ ಮಾಡಿದ
ಕೆಲಸವದು 'ಪಾದಸೇವೆ'
ನೆಂಟರಿಗೆ ಲೈಟಾಗಿ ಸತ್ಕರಿಸಿದರದುವೇ 'ಪುಣ್ಯಾರ್ಚನೆ'
ಜವಾಬ್ದಾರಿಯುತ ತಂದೆ, ತಾಯಿ
ಬುದ್ಧಿ ಹೇಳುವುದು 'ಮಹಾ ಮಂಗಳಾರತಿ'
ಪ್ರತಿದಿನ ಹಿರಿಯರ ನುಡಿಗಳು 'ಮಂಗಳಾರತಿ'
ವಯಸ್ಕರಿಗೆ, ಕೈಲಾಗದವರಿಗೆ ಊಟ ಕೊಡುವುದು 'ಅನ್ನ ಸಂತರ್ಪಣೆ'
ಒಬ್ಬನೇ ಇದ್ದವ 'ಮುನಿ'
ಗಲಾಟೆ ಮಾಡಿ ತಿನ್ನದೆ ಇದ್ದರೆ 'ಉಪವಾಸ'
ತನ್ನ ಕತೆಯನ್ನು ಹೇಳುತ್ತಾ ಹೋದರದು 'ರಾಮಾಯಣ'
ಗುರುಗಳ ಬುದ್ಧಿ ಮಾತದು 'ಗೀತೋಪದೇಶ'
ದೇವರ ನುಡಿಗಳಿವು
ನಮ್ಮ ಆಡು ಮಾತಿನಲಿ..
ಬರಬಾರದಿತ್ತು ದೇವರಿಗೀ
ಸಂಕಷ್ಟದ ಬದುಕು..
ಬೀದಿ ಬದಿ ಜಾಹೀರಾತು
ತರುಣಿಯೊಡನೆಯೂ ಹೋರಾಡಬೇಕು..
ತನ್ನ ಕಾರ್ಯಕ್ರಮವ
ಜಗಜ್ಜಾಹೀರುಗೊಳಿಸಿ
ಜನರ ತನ್ನೆಡೆ ಕರೆಯಲು....
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ