ಬುಧವಾರ, ಅಕ್ಟೋಬರ್ 3, 2018

501. ರವಿ ಬಂದನು

ರವಿ ಬಂದ

ಏಳಿರಿ ಏಳಿರಿ ಎದ್ದೇಳಿರೆನುತ
ರವಿಯು ಬಾಗಿಲ ಬಡಿದಾನ..
ನಿದ್ದೆಯ ಬಿಟ್ಟು ಸಾಧಿಸಿರೆನುತ
ಕರೆಯ ನಮಗೆ ನೀಡ್ಯಾನ..

ಮನದ ಬಾಗಿಲ ತೆರೆಯಿರೆನುತ
ಮನದಿ ಹಾಡಿ ಕರೆದಾನ..
ಜನಮನದ ಹೃದಯದ ಕತ್ತಲ
ತಾನು ಬೆಳಗಿ ಹಾಡ್ಯಾನ...

ಯೌವನವನು ಹಾಳುಗೆಡವದಿರೆಂಬ
ಸಂದೇಶ ಹೊತ್ತು ತಂದಾನ
ಮೌನದ ಮಾತನು ಅರ್ಥೈಸುವ
ವರವ ಹೊತ್ತು ನಡೆದಾನ..

ನಿಂತಲ್ಲಿ ನಿಲ್ಲಲು ಬೇಡಿರಿ ಎಂಬ
ನೀತಿಯ ಸಾರವ ಕಲಿಸ್ಯಾನ.
ಪರೋಪಕಾರದಿ ಬೆಳಗುವಿರೆಂಬ
ಮಾತನು ಸತ್ಯ ಮಾಡ್ಯಾನ...

ಜಗಳವ ಬಿಟ್ಟು ಮೌನದಿ ನಡೆಯಿರಿ
ಎನುವ ಶಾಂತಿಯ ಬೀಜವ ಬಿತ್ಯಾನ
ಲೋಕವ ಕಾಯುತ ನಾನೆಂದು ಮೆರೆಯದೆ
ನಾಯಕನ ಗುಣ ಹಂಚ್ಯಾನ..

@ಪ್ರೇಮ್@

ಅಜಿತ್ ರವರ ಬೃಹತ್ ವಿಮರ್ಶೆ...

@ಪ್ರೇಮ್ ಮೇಡಂ...

*ರವಿ ಬಂದ*

*ರವಿಯ ಕಾಂತಿಯು ನಮ್ಮನ್ನೆಲ್ಲ ಜಾಗ್ರತೆಯಿಂದ ಮುನ್ನಡೆಸಲು ಚಲುವರಾಯ ಬಂದಾನ*

ದಟ್ಟಣೆಯ ಕತ್ತಲು, ಆ ಕತ್ತಲ ಕಾಡಿನಲ್ಲಿ ನಶೆ ಏರಿ ಬಿದ್ದ ನಾವು ಬಾಳಿನ ದಾರಿಯ ಪಾಯನವನ್ನೇ ಮರೆತಿತು ಬಿಟ್ಟಿದ್ದಾಗ *ರವಿಯು ಏಳಿರಿ ಏಳಿರಿ ಎಂದು ಮನೆಯ ಬಾಗಿಲಿಗೆ ಬಂದು ನಿಲ್ಲುವನು*...
ಕತ್ತಲೆಯ ಮುದ್ದೆಯನ್ನು ಸೀಳಿ ಜೀವನದ ಕಿರಣಗಳನ್ನು ನಿಮ್ಮ ಬದುಕಿಗೆ ಬೆಳಕಾಗಿ ತಂದಿರುವೆನು ಏಳಿ ಎನ್ನುವ ಕೂಗು... ಬಹಳ ಮನಮೋಹಕವಾಗಿದೆ...

ಸೂರ್ಯನ ಕಿರಣದ ಒಂದು ಎಳೆಯನ್ನು ಹೊತ್ತು ಬದುಕ ನಡೆಸುವ ನಮ್ಮ ದಿನವು ಸುಖಕರವಾಗಿರಲಿ ಎಂಬುದು ಸುಂದರ. *ಸಾಕಿನ್ನಾದರು ಏಳಿ ಜೀವನ ಕಷ್ಟ ಅಂತ ಸುಮ್ಮನೆ ಕೂಡದಿರಿ ಸೂರ್ಯನ ಬೆಳಕಿನೆಡೆಗೆ ಜೀವನವನ್ನು ಬೆಳಕಾಗಿಸಿಕೊಳ್ಳಿ* ಎಂಬ ನಿಮ್ಮ ಸಂದೇಶ ಇನ್ನೊಬ್ಬರ ಸೋಲಿನ ದಾರಿಗೆ ಧೈರ್ಯ ತುಂಬುವಂತಿದೆ...
*ಜನಮನದ ಹೃದಯದಲ್ಲಿ ಕತ್ತಲ ತಾನು ಬೆಳಗಿ* ಹೌದು ಮೌಢ್ಯತೆ, ಸೋಲು,ಜೀವನ, ಕಷ್ಟ, ನಷ್ಟ, ಎಲ್ಲಕ್ಕೂ ಬೆಳಕಾಗಿ ನಿಂತು ಉರಿದಾನ. ತನ್ನ ತಾನೇ ಸುಟ್ಟುಕೊಂಡು ಜಗಕ್ಕೆ ಬೆಳಕಾಗ್ಯಾನ.... *ಚಂದದ ಜೀವನದದ ಬೆಳಕು ಚಂದಾದಾಗಿದೆ*...

ಜೀವನದಲ್ಲಿ ಸಾಧನೆಯೂ ಒಂದು ಅದ್ಭುತ ಘಟ್ಟ ಅದನ್ನು ಹರೆಯದ ಹುರೂಪಿನಲ್ಲೇ ಸಾಧಿಸಿ ಎಂಬುದು ಸುಂದರವಾದದ್ದು.... *ಸಾಕಿನ್ನ ಸುಮ್ಮನೆ ಕುತಿದ್ದು ಏಳಿ ದುಡಿಯಿರಿ ಏನನ್ನಾದರೂ ಸಾಧನೆಗೈಯಿರಿ,ಇನ್ನೊಬ್ಬರಿಗೆ ದಾರಿಯಾಗಿ* ಎಂದು ಸಂದೇಶದಿ ಬೆಳಕ ಮೂಡಿಸಿ ಬಂದಾನ...
ಸಾಕಿನ್ನ ಈ ಜತಾಜಿಟಿಯ ಬದುಕು ಮಿಂಚಿನಂತೆ ಏಳಿ... ಸಕ್ಕಟ್ಟಾಗಿತ್ತು.
*ಮೌನದ ಮಾತನ್ನು ಸಹ ಆಅರ್ಥೈಸಿಕೊಳ್ಳಬಲ್ಲನು ಇವನು* ಇಂತಹ ಚಾಣಾಕ್ಷ ಶಕ್ತಿ ಇದು.. ಮೌನವನ್ನು ಸಹ ಅರ್ಥೈಸಿಕೊಂಡು ಬರುವ ದಾರಿ ಆದಷ್ಟು ಸುಲಬದ್ದಲ್ಲ. ಗರಿಗೆದರಿ ನಿಂತವನವನು ದಿನ ನಿತ್ಯದದ ಜೀವನವನ್ನು ಕಂಡು ಬೇಸತ್ತ ಬದುಕಿಗೆ ಮತ್ತೆ ಮತ್ತೆ ಸಾರಿ ಹೇಳುವ ಪರಿ ದಾರಿ ದೀಪವೇ ಸರಿ....

ಒಂದೆ ಸುರಿನಡೆಗೆ ನಿಲ್ಲದಿರಿ ಬದಲಾವಣೆ ಜಗದ ನಿಯಮ ಎಂದು ಹೇಳುವ ಬೆಳಕು ಅದು ಕತ್ತಲ ಜ್ಯೋತಿ...
*ನಿಂತಲ್ಲಿ ನಿಲ್ಲಲು ಬೇಡಿರಿ ನೀತಿಯ ಸಾರಾವ್ಸ್ ಕಲಿಸ್ಯಾನ* ಹೌದು ಈ ಪದ ಪ್ರಕೃತಿಗೇನು ಸಹ ಅನ್ವಯವಾಗುತ್ತೆ ಹಾಗೆ ಪಾಲಿಸುತ್ತೆ ಸಹ,. ಹೇ ಮನುಜನೆ ನೀನು ಒಂದೇ ಕಡೆ ನಿಲ್ಲದಿರು ಎಂಬ ನೀತಿ ಚಂದ *ಒಂದೇ ಕಡೆ ನಿಂತ ನೀರು ವಾಸನೆಗೆ ಪೂರಕ, ಹರಿಯುವ ನದಿ ಸಾಗರದ ಮುತ್ತಿನ ರಕ್ಷಣೆಗೆ ಪೂರಕ* ಎಂಬ ಮಾತನ್ನು ಇಲ್ಲಿ ನಾನು ಹೇಳಬಲ್ಲೆನು....
ನಿನ್ನ ಜೀವನ ನಿನಗಾಗದಿರಲಿ ಎಂಬ ಸತ್ಯದ ಜೀವನವು ಹೌದು ಅದು ಮೋಕ್ಷ ಅನ್ನುವ ನಂಬಿಕೆನು ಹೌದು.... *ಹೆರುವ ತಾಯಿಯು ಸಹ ಇನ್ನೊಂದು ಜನ್ಮಕ್ಕೆ ಕಾಲಿಟ್ಟು ಆ ಇನ್ನೊಂದು ಜೀವಕ್ಕೆ ಜೀವನವಾಗಿ ಆ ಜೀವದ ಉದ್ದರಕ್ಕಾಗಿ ಪಡುವ ಕಷ್ಟ, ನಿಸ್ವಾರ್ಥ ಭಾವ* ನಿನ್ನದಾಗಲಿ.. ತಾಯ್ತನದ ಗುಣ ನಿನ್ನಲಿರಲಿ *ಪರೋಪಕಾರಿ ಜೀವನವನ್ನು ಸೂರ್ಯ ನಿಜ ಮಾಡ್ಯಾನು ಎಂಬುವ ದಿನಚರಿಯನ್ನು ಮನನ ಮಾಡಿದ್ದು ಅದ್ಬುತ*...  ನನಂತೆ ನಿವಾಗದಿದ್ದರು ಸಣ್ಣ ಹನತೆಯಂತೆ ಆದರೂ ಒಂದಿಷ್ಟು ಜನರಿಗೆ ಬೆಳಕಾಗು ಎಂದು ಹೇಳುವ ಈ ದಾರಿ ನಿಜಕ್ಕೂ ರೋಮಾಂಚನ....

*ಜಗಳವ ಬಿಟ್ಟು ಮೌನದಿ ನಡೆಯಿರಿ ಎಂಬ ಶಾಂತಿ ಬೀಜ ಬಿತ್ಯಾನ* ಎಂತ ಮನಸ್ಸು ಇದು ಜವವೆಲ್ಲ ಶಾಂತಿಯುತವಾಗಿರಲಿ ಎಂಬ ಶಾಂತ ಮನಸ್ಸು, ಶಾಂತಿ ಧೂತರಿಗೆ ಸರಿ. ಸಹೋದರತೆಯೇ ಮೇರೆಗೆ ಬದುಕಿ ಸಹಬಾಳ್ವೆಯನ್ನು ಬದುಕಾಗಿಸಿಕೊಳ್ಳಿ ಎಂಬ ನಿಮ್ಮ ಬುದ್ದಿ ಮಾತು ಅಂದವೋ ಅಂದ... *ಶಾಂತಿಗೆ ಬುದ್ಧ ಯುದ್ಧಕ್ಕೆ ಮಹಾಭಾರತ* ಎಂಬ ಸಂದೇಶವನ್ನು ಇಲ್ಲಿ ಬಿಟ್ಟಿದ್ದು ಅಮೋಘತೆಯನ್ನು ಮಿಂಚಿಸುತ್ತದೆ. ಮತ್ತೆ ಮತ್ತೆ ನೀನು ಜನರ ಕಲ್ಯಾಣಕ್ಕೆ ಶಾಂತಿಯ ಬುದ್ಧನಾಗು, ದುಷ್ಟರ ಸಂಹಾರಕ್ಕೆ ನೀನು ಶ್ರೀಕೃಷ್ಣನಾಗು.... ವ್ಹಾವ ಎಂತ ಮಾರ್ಮಿಕತೆಯನ್ನು ಮೆರೆದಿದ್ದಾನೆ ಈ ಬೆಳಕಿನ ಮುದ್ದೆ....
*ಲೋಕವ ಕಾಯುವ ನಾನೆಂದು ಮೆರೆಯದ ನಾಯಕನ ಗುಣ* ಜಂಬ ಬೇಡ, ಅಹಂಕಾರ ಬೇಡಾ ಇನ್ನೊಬ್ಬರಿಗೆ ಸಹಾಯದ ನೆಪದಲ್ಲಿ ಅವರನ್ನು ಹೀನಗಳಿಯಬೇಡ, ಸಾಯುವ ಮೊದಲು ಮಾನವನಾಗು,ದಾನವನಾಗು, ಅಹಂಕಾರಿಯಾಗಬೇಡ ಎಂಬ ನಿಮ್ಮ ಬರಹ ತೇಜಸ್ಸನ್ನೇ ಪಡೆದುಕೊಂಡತಾಯಿತು. *ಲೋಕದ ಹಿತ ನಿನ್ನ ಹಿತ ಜನರ ಮನ ಗೆಲ್ಲುವ ಮನಿಜನಾಗು ನೀನು* ನಾಯಕತ್ವದ ಗುಣ ನಿನ್ನಲಿರಲಿ ಆದರೆ ಯಾವುದು ಆಮೀಸೆಯನ್ನು ಪದ ವ್ಯಕ್ತಿಯಾಗಿ ಚಿರಂಜಿವಿಯಾಗು.... ವ್ಹಾರೆ ವಾ...

*ಕಡಲ ನಿರನ್ನಿ ಕಾಣುವ ಬೆಳಕೆ ನೀನು, ಲೋಕದ ಸುಂದರತೆಯನ್ನು ಗುರುತಿಸುವ ಬೆಳಕೆ, ಸತ್ಯದ ಪರ್ವತವನ್ನು ತೋರುವ ಬೆಳಕೆ, ಕಪ್ಪು ಬಣ್ಣದ ಮನವನ್ನು ಬೆಳಗುವ ಬೆಳಕೆ,ಜೀವನದ ಬೆಳಕಾಗು ನೀನು ಎನ್ನುವ ಬರಹ ಅದ್ಭುತಕ್ಕೆ ಅದ್ಬುತ*

ಆದರೂ ಸಹ ಇದು ಬದುಕಲ್ಲವೇ ಸೂರ್ಯ ಬಂದರು, ಎಷ್ಟೇ ಪ್ರಕಾಶವಾಗಿ ಬಂದರು ಅವನ ಹಿಂದಿನ ಕತ್ತಲು ಅವನನ್ನು ತಳ್ಳಿ ಹಾಕುತ್ತಾನೆ,
ಆದರೂ ಸೋಲದೆ ಮತ್ತೆ ಉತ್ಸಾಹದಿ ಬರುವ... *ಈ ಉತ್ಸಾಹ ನಮ್ಮೆಲ್ಲರಲ್ಲೂ ಇರಲಿ ಎಂಬುದು ಡಿತವಾದದ್ದು*...

*ಕತ್ತಲೆಯ ಮುದ್ದೆಯಲ್ಲಿ ದೀಪವೊಂದು ಸೋಲದೆ ಸತ್ತಿತ್ತಂತೆ....*

ಬೆಳಕು ಎಷ್ಟು ಶ್ರೇಷ್ಟವೋ ಅಷ್ಟೇ ಕಪ್ಪು ಕೂಡ ಶ್ರೇಶವಾದದ್ದು...

ಸೋಲು ಗೆಲುವು,
ಒಳ್ಳೇದು ಕೆಟ್ಟದ್ದು ಒಂದೆ ನಾಣ್ಯದ ಎರಡು ಮುಖಗಳು...

ಬಹಳ ಸುಂದರವಾದ ಚಿತ್ರಣವಿದು...
*ಚುಪರ* 😊😊

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ