ಮುಗ್ಧ ಮನಕೆ
ಹೃದಯ ತುಂಬಿ
ಹರಸಿ ಎಲ್ಲರೂ..
ನೂರು ಕಾಲ
ಬಾಳು ಎನುತ
ಬಯಸಿ ಸರ್ವರೂ..
ಮಕ್ಕಳೆಂದೂ ದೇವರಂತೆ
ರೋಷ ಮೊಸ
ಕಪಟವರಿಯರು..
ನಾವು ಬೆಳೆಸಿದಂತೆ
ತಾವು ಬೆಳೆದು
ಹಿರಿಯರನ್ನು ನೋಡಿ
ಬುದ್ಧಿ ಕಲಿವರು..
ಮಗಳು ಎಂದೂ
ತಾಯಿಯಂತೆ..
ಪ್ರೀತಿ ಕೊಡುವಳು..
ಹೆಣ್ಣು ಮಕ್ಕಳೇನು
ಎಂದು ತೋರಿ ಬಿಡುವಳೂ..
ಗಂಡಿಗಿಂತ ಕಮ್ಮಿಯೇನು
ಎನುತ ಮೆರೆವಳು..
ತಂದೆ ತಾಯಿಗೆ ತನ್ನ
ಪ್ರೀತಿ ಧಾರೆಯೆರೆವಳು..
ಇದ್ದ ಮನೆಯ ಬೆಳಗಿ
ಹೋದ ಮನೆ ಬೆಳಗುವಳು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ