ಶುಕ್ರವಾರ, ಅಕ್ಟೋಬರ್ 12, 2018

522. ನಿನ್ನಿಂದ ಬಾಳು ಬಂಗಾರ

ನೀನಿರೆ ಬದುಕು ಬಂಗಾರ

ಬದುಕಲ್ಲಿ ಒಂದಾಗುವ .... ನಾವಿಂದು ಜೊತೆ ಸೇರುವ...
ನಿನ್ನಾ ಜೊತೆಗೆಂದೂ....
ನಾ ಬರುವೆ ಎಂದೆಂದೂ...
ಬಾಳೆಲ್ಲಾ ಬಂಗಾರ ಇನ್ನು ಹೀಗೇ ಎಂದೂ....//ಬದುಕಲ್ಲಿ//

ಬಾಳಲ್ಲಿ ನೀನು ಬಂದರೆ ಎಂದೂ
ಶೃಂಗಾರ ಕಾವ್ಯ ನಮ್ಮಯ ಬಾಳು..
ಜೊತೆಯಲ್ಲೆ ನಡೆಯುತಲಿರಲು
ದಿನವೂ ಬಾಳೊಂದು ಅಮರ ಕಾವ್ಯ...//ಬದುಕಲ್ಲಿ//

ನಿಮಿಷಕೆ ಒಮ್ಮೆ ನೆನಪಾಗುವೆ ನೀನು..
ನಿನ್ನ ಪ್ರೀತಿ ಧಾರೆ ಎರೆದಿರುವೆ ನೀನು..
ನನ್ನ ಮುದ್ದು ಮಾಡಿ ಹಾಡಿರುವೆ ನೀನು..
ನನಗೆ ಬದುಕು ಕೊಟ್ಟ ದೇವತೆ ನೀ..
ನಾ ಎಂದೂ ದೂರಾಗೆ ಬಿಡೆನು ನಿನ್ನ// ಬದುಕಲ್ಲಿ//

ನನ್ನ ಕಂಗಳಲಿ ನಿನ್ನದೆ ಪ್ರತಿಬಿಂಬ..
ನನ್ನ ಹೃದಯದಲಿ ನಿನ್ನದೇ ಬಡಿತ..
ನನ್ನಾಣೆ ಓ ಜಾಣೆ ನೀನೆ ನನಗೆ ದೇವಿ..
ಬಾರೆನ್ನ...ಸೇರೆನ್ನ..ಒಲವ ಬಳ್ಳಿ ಹೂವೆ..//ಬದುಕಲ್ಲಿ//

ಮನೆದಲಿ ನೀನಿರುವೆ...
ನನ್ನ ಮನದಲು ನೀನಿರುವೆ...
ನೀನಿರೆ ನಾನಿರುವೆ...
ನೀ ಬಂದರೆ ನನಗಾಗಿ..
ನನ್ನ ಬದುಕನೆ ಮುಡಿಪಿಡುವೆ..
ಬಾಳಲ್ಲಿ ಬಾರೆನ್ನ...ಸೇರೆನ್ನ ಸಂಗಾತಿಯೇ..//ಬದುಕಲ್ಲಿ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ