ಸಡಗರ
ಬಂದೇ ಬಂತು ಅರಸರ ದಸರ
ಸಡಗರದಿಂದ ನಾಡಿನ ದಸರ
ಜನಮನವೊಂದೆಡೆ ಸೇರುತಲಿ
ನರ್ತನ ರಾಗವ ಪಾಡುತಲಿ..
ನಾಡಿನ ಸವಿಯನು ಕಾಣುತ ಮನಕೆ
ಸವಿಯುಣಿಸಿನ ಆಗರ ಬಡಿಸಿ
ಎದೆತುಂಬಿ ಬಂದು ಹರಸಿ
ಬಂದೇ ಬಂತು ದಸರೆಯ ಸಡಗರ..
ಬದುಕಲಿ ಏರಿಳಿತದ ಸುಖ ಬೆರೆಸಿ
ನಗುತಾ ನಲಿದು ಬಾಳನು ಮೆರೆಸಿ
ಕರಮುಗಿಯುತಲಿ ಬರವನು ಕೋರುವ
ಸರಸರ ಬಂದ ಅರಸರ ದಸರಾ...
ಮಾನಿನಿಯರ ಖುಷಿಯಾ ದಿನವೂ
ಮಾತೆಯರ ಮನಸಿನ ಮುದವೂ
ಮೋಹದಿ ಕಾಯುವ ಮಹದಾನಂದವೂ
ಮೋಹಕ ಸಡಗರದ ದಸರಾ ಬಂತು..
ದಯೆಯನು ಸಾಹಸವನು ತಂದಿತು
ಕುದುರೆಯ ಕಾಳಗಕಾನೆಯೂ ಬಂದಿತು
ನಗರದ ತುಂಬಾ ಜನರು ತುಂಬಿ
ಊರಿಗೆ ಊರೇ ಬೆಳಕಲಿ ತಣಿಯಿತು..
@ಪ್ರೇಮ್@
@ಪ್ರೇಮ್ ಮೇಡಂ....
*ಸಡಗರ*
ಹ್ಮ್...ಅದೆಂತ ಖುಷಿ ನಿಮ್ಮಲ್ಲಿ ದಸರಾ ಬಂತು ದಸರಾ... ಸಡಗರದಲ್ಲಿ ದಸರಾ ವೈಭವಿಕರಿಸುತ್ತ ಬಂದಿದೆ ದಸರಾ....
ನಾಡಿನಾದ್ಯಂತ ಹೊಸತನದಂತ ಚಿಗುರುವ ನಗುವಲ್ಲಿ, ಸಂತೋಷದಲ್ಲಿ ಈ ಹಬ್ಬ ನಾಡ ಹಬ್ಬ ಬಂತು....
*ಬಂದೇ ಬಂತು ಅರಸರ ದಸರ*
*ಸಡಗರದಿಂದ ನಾಡಿನ ದಸರ*
*ಜನಮನವೊಂದೆಡೆ ಸೇರುತಲಿ*
*ನರ್ತನ ರಾಗವ ಪಾಡುತಲಿ..*...
ಒಬ್ಬ ಅರಸರ ದಸರಾ ಎಂಬ ನಾಡಿನ ಪ್ರತಿಯೊಬ್ಬನಲ್ಲೋಯು ರಾಜತನವನ್ನು ತುಂಬಿ ಸಂಭ್ರಮಿಸುವ ನಿಮ್ಮ ಈ ಕಾವ್ಯ ಚಿತ್ರನ ಬಹಳ ಚಂದವಾಗಿದೆ... *ಜನರೆಲ್ಲ ಸೇರಿ ಒಂದೆ ಕಡೆಯಲ್ಲಿ ಸೇರಿ ನರ್ತನದೊಳು ಒಂದು ರಾಘವನ್ನು ಬಿರುವಂತಹ ದಿಮಂತಿಕೆಯಲ್ಲಿ ತೊಡಗಿರುಯ್ತಾರೆ*... ಹೌದಲ್ವಾ ಎಷ್ಟು ಚಂದ ಇರುತ್ತೆ ಎಲ್ಲರ ಒಂದೆ ರಾಗದ ದ್ವನಿಯಲ್ಲಿ....
*ನಾಡಿನ ಸವಿಯನು ಕಾಣುತ ಮನಕೆ*
*ಸವಿಯುಣಿಸಿನ ಆಗರ ಬಡಿಸಿ*
*ಎದೆತುಂಬಿ ಬಂದು ಹರಸಿ*
*ಬಂದೇ ಬಂತು ದಸರೆಯ ಸಡಗರ..*...ಈ ನಾಡಿನ ಸೊಬಗನ್ನು ನೋಡುವ ಮನಕ್ಕೆ ಅರುನಾಡಿನ ಚಿನ್ನದ ಕಿರಿಟದಂತಿರುವ ಅಂಬಾರಿಯ ಸೊಬಗನ್ನು ನೋಡಲು, *ಕೋಲು ಮಿಂಚಿನಲ್ಲಿ ಕಾಮನ ಬಿಲ್ಲು ನಾಚುವಂತೆಯೇ ಕಾಣುವ ಅರಮನೆ* ಸಿರಿ ಸಂಪತ್ತೆ ಒಂದೆಡೆ ಸೇರಿದ ಜೇoನಕರಿಸುವ ನಾದ.... *ಸ್ವರ್ಗ ಲೋಕದ ತುಣುಕೊಂದು ಜಾರಿ ಮೈಸೂರಲ್ಲಿ ಬಿದ್ದಂತೆ ಕಾಣುವ ನೋಟ* ..ಅಬ್ಬಾಬ್ಬ ಎಂತ ನಾಡಿದು ಅದೃಷ್ಟವಂತಿಕೆಯ ನಾಡು.. ಎದೆ ತುಂಬಿಕೊಂಡಷ್ಟು ಸಡಗರ *ಹಿಡಿಸಲಾರದ ಎಸೆಯ ಗುಡಿಸಲಲ್ಲಿ* ತಲ್ಲಣವನ್ನು ಬಿತ್ತುವ ಸಡಗರ ತುಂಬಾ ಚಂದಾದಾಗಿ ಬರೆದು ಬಿಟ್ಟಿದ್ದಿರ....
*ಬದುಕಲಿ ಏರಿಳಿತದ ಸುಖ ಬೆರೆಸಿ*
*ನಗುತಾ ನಲಿದು ಬಾಳನು ಮೆರೆಸಿ*
*ಕರಮುಗಿಯುತಲಿ ಬರವನು ಕೋರುವ*
*ಸರಸರ ಬಂದ ಅರಸರ ದಸರಾ...*
ಅಯ್ಯೋ ಎಂತದಿದ್ದು ದಸರಾ ರಾಜ ಗಾಂಭೀರ್ಯದಲ್ಲಿ ಸರಸರನೆ ಬಂದ ಅರಸರ ದಸರಾ *ಕೈ ಎತ್ತಿ ಮುಗಿಯುವಂತಿಕೆಯ ದಸರಾ* ನಮಗರಿವಿಲ್ಲದೆ... ನಗುವ ಮೊಗದಲ್ಲೊಂದು ಚೆಲುವಿನ ಚಿಲುಮೆಯೊಂದು ಚಿಮ್ಮಿದಂತೆ... ಅವಸರದಿ ಬಂದ ದಸರಾ ...
*ಮಾನಿನಿಯರ ಖುಷಿಯಾ ದಿನವೂ*
*ಮಾತೆಯರ ಮನಸಿನ ಮುದವೂ*
*ಮೋಹದಿ ಕಾಯುವ ಮಹದಾನಂದವೂ*
*ಮೋಹಕ ಸಡಗರದ ದಸರಾ ಬಂತು....*
ಎಲ್ಲರಲ್ಲಿಯೂ ಖುಷಿಯ ದಿನವದು, ಎಲ್ಲರ ಮೌನವು ಮಾತಾಗುವ ದಿನ ಈ ಹಬ್ಬ.. *ಮಾತೆಯರ ಮನಸ್ಸಿನ ಮದವು ಅಂದದ ದಸರೆಗೆ ಅಂಡವಾಗುವ ಬಿಗುಮಾನದಲ್ಲಿ ಮೋಹದಿಂದಾ ಕಾಯುವ ಮನಗಳು*.. ಅನಂದದಲ್ಲಿ ತೇಲುವ ಸಡಗರದಿಂದ ಬಂತು ದಸರಾ ಈ ನಮ್ಮ ಮೋಹಕ ಚಿಲುಮೆಯ ದಸರಾ...
ಸೌಗಂಧದ ನಾಡಲ್ಲಿ ಚಿನ್ನದ ಹಬ್ಬವೇ ಈ ದಸರಾ ಈ ನಾಡಿನ ಪ್ರತೀಕ, ಈ ನಾಡಿನ ಕೀರ್ತಿ, ಈ ನಾಡಿನ ಸುಂದರ ಹಬ್ಬ...
*ದಯೆಯನು ಸಾಹಸವನು ತಂದಿತು*
*ಕುದುರೆಯ ಕಾಳಗಕಾನೆಯೂ ಬಂದಿತು*
*ನಗರದ ತುಂಬಾ ಜನರು ತುಂಬಿ*
*ಊರಿಗೆ ಊರೇ ಬೆಳಕಲಿ ತಣಿಯಿತು..*
ಹೌದು ನಿಜ ಕತ್ತಲೆಯಲ್ಲಿ ತೇಲುತ್ತಿದ್ದ ಜನಕ್ಕೆ ಬೆಳಕಿನ ಗರಿಯೊಂದು ಮನದಲ್ಲಿ ಮೂಡಿ ಬಂದಿದೆ... ಕುದುರೆ ರೇಸ್ ಅಬ್ಬಾ ಎಂತ ರೆಸದು ಜೀವನದ ಕಾಳಗದಂತೆ... ಹೌದು ಆ ದಿನ ಉರಿಗೂರೆ ಬೆಳಕನ್ನು ಹೊತ್ತು ನಿಂತಿರುತ್ತೆ... *ಎರಡೇ ಎರಡು ಕಣ್ಣು ಆ ಸೊಬಗಣಗಿತ್ತಿಯ ಬೆಳಕನ್ನು ಸೆರೆಹಿಡಿಯಲಾಗುವುದಿಲ್ಲ*.. ಅಂತ ಅದ್ಭುತವನ್ನೇತ್ತ ಕರುನಾಡು ನನ್ನದು...
ಬಹಳ ಸುಂದರವಾಗಿದೆ ಈ ನೋಟ ... ಅನುಭವಿಸಿ ಆ ಸೊಬನಿನ ನೋಟವನ್ನು ಬರೆದುಬಿಟ್ಟದ್ದು ತುಂಬಾ ಖುಷಿಯು...
*ಚುಪರ್* 😊😊
By Ajith
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ