ಶನಿವಾರ, ಅಕ್ಟೋಬರ್ 6, 2018

510. ಮಕ್ಕಳು-ಪ್ರಜೆಗಳು

ಸ್ಪರ್ಧೆಗಾಗಿ

ಮಕ್ಕಳು-ಪ್ರಜೆಗಳು

ಇಂದಿನ ಮಕ್ಕಳು ನಾಳಿನ ಪ್ರಜೆಗಳು
ಎನ್ನುವ ಮಾತದು ಹಿಂದಿನ ಕಾಲಕೆ,
ಇಂದಿನ ಮಕ್ಕಳು ಇಂದೂ ಪ್ರಜೆಗಳೆ
ಯುವಕರು ಅವರು ನಾಳಿನ ದಿನಕೆ..

ಇಂದು ಕಲಿತು ಇಂದೇ ಬೆಳೆವರು
ನಾಳಿನ ದಿನಕೆ ಇಂದೇ ಕಲಿವರು,
ದೇಶವ ಆಳುವ ನಾಯಕರ ನೋಡುವರು
ತಮ್ಮಾಳ್ವಿಕೆಯ ಕನಸನ್ನು ಕಾಣುವರು..

ಮನದಿಂದ ಬೆಳೆಸಿರಿ ನಮ್ಮಯ ಮಕ್ಕಳ
ಇಲ್ಲಾಂದ್ರೆ ನಾಳೆ ನಮ್ ಕೈಗೇ ಸಿಕ್ಕಲ್ಲ..
ಉತ್ತಮವಾದದ್ದೆ ಕಲಿಸ್ಬೇಕು ಅವರಿಗೆ
ಇಲ್ಲಾಂದ್ರೆ ಕಷ್ಟ ನಾಳೆ ನಮಗೆ..

ಮಕ್ಕಳ ಆಟ-ಪಾಠವ ಗಮನಿಸಿ
ಇಂದಿನ ಮಗುವೆ ನಾಳಿನ ಯುವಕ
ಮಕ್ಕಳ ಆಟಕ್ಕೆ ಕೊಡಿ ಚೆಂಡು ಬ್ಯಾಟು
ಬೇಡ ಬಂದೂಕು,ಪಿಸ್ತೂಲು ಪಟಾಕಿ..

ಶಾಂತಿಯ ಮಂತ್ರವ ಕಲಿಸಿರಿ ಇಂದು
ಸಹಾಯಕ ಮುಂದಕ್ಕೆ ಅವರಿಗೆ ಎಂದೂ
ನಮ್ಮನ್ನು ನಾವೇ ಪರೀಕ್ಷಿಸಬೇಕು
ಮಕ್ಕಳಿಗೆ ನಾವೇನು ಹೇಳಿ ಕೊಡಬೇಕು...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ