ಗಝಲ್-41
ಭಾವವೆಲ್ಲ ಬತ್ತಿ ಬರಡಾದ ಬಾಳು ಒಂಟಿಯಾಗಿದೆ..
ಬಯಸಿ ಬಂದ ಒಲವು ಸಿಗದ ಬಾಳು ಒಂಟಿಯಾಗಿದೆ..
ಬಯಕೆ ಬರಲು ಬದುಕ ಬವಣೆ ಸಾಕೆಂದಾಗಿದೆ..
ಭಯದ ಬಂಧನ ಒದಗಿಸುತ್ತ ಬರಿದ ಬಾಳು ಒಂಟಿಯಾಗಿದೆ..
ಬಾಳಿಗೆಂದು ಬಂದ ಗೆಳತಿ ಹೃದಯ ಚೂರು ಮಾಡಿದೆ
ಬೇಡವೆಂದರೂ ನೆನಪು ಕಾಡಿದ ಬಾಳು ಒಂಟಿಯಾಗಿದೆ..
ನನ್ನದೆನುವ ಮನವು ಇಂದು ಪರರ ಸ್ವತ್ತಾಗಿದೆ..
ನಕ್ಕುನಗಿಸಿದಂಥ ಕ್ಷಣವ ನೆನೆದ ಬಾಳು ಒಂಟಿಯಾಗಿದೆ..
ಒಂಟಿ ಮರದ ಎಲೆಗಳೆಲ್ಲ ಉದುರಿದಂತಾಗಿದೆ..
ರೆಂಬೆ ಕಡಿದು ಸುಟ್ಟುಹೋದ ಬಾಳು ಒಂಟಿಯಾಗಿದೆ..
ಗಗನದಿಂದ ಉದುರಿ ಬಿದ್ದ ನಕ್ಷತ್ರದಂತೆ ಆಗಿದೆ..
ಬಿರಿದ ಹೂವು ನಕ್ಕು ನಲಿದು ಮುದುಡಿದ ಬಾಳು ಒಂಟಿಯಾಗಿದೆ..
ಮುದದಿ ಕಳೆದು, ಕೈಯ ಕೊಟ್ಟು ಭಾವ ಸತ್ತುಹೋಗಿದೆ
ಪ್ರೇಮದಿಂದ ಬಿರಿದ ಎದೆಯು ಕುಗ್ಗಿದ ಬಾಳು ಒಂಟಿಯಾಗಿದೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ