ಗಝಲ್-45
ಗಿಡ,ಮರ-ಬಳ್ಳಿಯೊಡಲ ಮೌನವೇ ನನ್ನುಸಿರು..
ಹೂ, ಕಾಯಿ ಹಣ್ಣುಗಳ ಪರಿಮಳವೇ ನನ್ನುಸಿರು..
ನದಿ, ಕೆರೆ,ಕೊಳಗಳ ಸ್ವಚ್ಛವಾದ
ನೀರಲೆಯ ರಭಸ,
ಒಣ ಎಲೆ, ಕಿರು ಮೊಗ್ಗು, ಮುಳ್ಳಿನ ತುದಿಯದುವೇ ನನ್ನುಸಿರು..
ಅತ್ತಿಯ ಹೂವು, ಗೇರು ಬೀಜ, ಪರಂಗಿ ಹಣ್ಣು..
ಕತ್ತಿಯ ತುದಿಯದು ಗಿಡಕೆ ತಾಗಿದಾಗ ಹೋಯಿತದುವೇ ನನ್ನುಸಿರು..
ಎಲೆ ತುದಿಯಲಿ ಜಾರಿ ಬೀಳಲು ಕಾದು ಕುಳಿತ ಹಿಮಬಿಂದು,
ಹೂವಿನೊಳಗಿರುವ ಚಿಟ್ಟೆ ಹೀರುವ ಸಿಹಿ ಮಕರಂದವೇ ನನ್ನುಸಿರು..
ಸಮಯಕ್ಕೆ ಬದಲಾಗುವ ಗೋಸುಂಬೆ, ಕಪ್ಪೆ,ಚಿಟ್ಟೆ
ಪರಿಸರಕೆ ತಕ್ಕನಾಗಿ ಬೆಳೆದಿಹ ಹುಳು ಹುಪ್ಪಟೆ, ಕೀಟಗಳ ಬಣ್ಣವದುವೇ ನನ್ನುಸಿರು..
ಕುಹೂ ಕುಹೂ ಕೋಗಿಲೆಯ ಗಾನದೊಳಗಿನ ಸ್ವರ,
ಹಕ್ಕಿಯ ಇಂಚರದ ಮೃದು ಮಧುರ ನಾದವೇ ನನ್ನುಸಿರು ...
ಪ್ರಕೃತಿ ಪ್ರೀತಿಯದು ಬದುಕಿನ ಅಂಗ
ಪ್ರೇಮದಿ ಗಿಡ ಮರಗಳ ಕಡಿಯದೆ ಉಳಿಸಿದರದುವೇ ನನ್ನುಸಿರು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ