ಶುಕ್ರವಾರ, ಅಕ್ಟೋಬರ್ 12, 2018

524. ಇಲ್ಲಗಳ ಸಾಲಿನಲಿ

ಇಲ್ಲಗಳ ಸಾಲಿನಲ್ಲಿ

ಮಾಡರ್ನ್ ಯುಗನೋಡಿ..
ನನಗಿಲ್ಲ ಸಮಯ..ನನಗಿಲ್ಲ ಒಳ್ಳೆ ಕೆಲಸ...
ನನಗಿಲ್ಲ ಸಹನೆ..ನನಗಿಲ್ಲ ತಾಳ್ಮೆ..
ನನಗಿಲ್ಲ ಅದೃಷ್ಟ.. ನನ್ನಲಿಲ್ಲ ಹಣ..

ಬೆಳಗಿಂದ ಸಂಜೆವರೆಗೆ ದುಡಿಯುವೆ
ಸಂಜೆ ಮಾಲಲ್ಲಿ ಸಣ್ಣ ಶಾಪಿಂಗ್
ಗೆಳೆಯರೊಂದಿಗೆ ಕಾಫಿಡೇನಲ್ಲಿ ಹರಟೆ
ನನಗೆಲ್ಲಿದೆ ಸಮಯ ಕೆಲಸಕೆ?

ಬೆಳಗಾಯಿತೆಂದರೆ ವಾಕಿಂಗ್ ಜಾಗಿಂಗ್
ಯೋಗ ಪ್ರಾಣಾಯಾಮ ಮಾಡಬೇಕಂತೆ
ಟ.ವಿ ವಾರ್ತೆ ನೋಡಲು ಪತ್ರಿಕೆ ಓದಲೂ
ಸಮಯವಿಲ್ಲದಿರುವಾಗ ಹೇಗಿದು ಸಾಧ್ಯ?

ಸಂಬಂಧಿಕರು ಮದುವೆ, ಪೂಜೆಗೆ ಕರೆವರು
ಗೆಳೆಯರು ಪಾರ್ಟಿ, ಮೀಟಿಂಗ್ ಗೆ ಆಹ್ವಾನ ನೀಡುವರು
ಹೇಗೆ ಹೋಗಲಿ ಎಲ್ಲಾ ಕಡೆಗೆ?
ನಾನೊಬ್ಬನೇ... ಸಮಯವೆಲ್ಲಿಹುದೆನಗೆ?

ಆರೋಗ್ಯ ಸರಿ ಇಲ್ಲ..
ಒಂದು ಉತ್ತಮ ವೈದ್ಯರಿಲ್ಲ..
ಒಳ್ಳೆ ಆಹಾರ ಸಿಗುತ್ತಿಲ್ಲ..
ಬೇಕರಿ ಯಾಕೆ ಮುಚ್ಚಿಹರಲ್ಲ!!??

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ