ಮಂಗಳವಾರ, ಅಕ್ಟೋಬರ್ 16, 2018

530. ಹಾಯ್ಕು

ಹಾಯ್ಕು

ಶುಭ ರಾತ್ರಿಯ
ಸವಿ ನಿದ್ದೆ ಗಳಿಗೆ
ಚೆನ್ನಾಗಿರಲಿ..

ನಿದ್ದೆ ಮಡಿಲು
ಬರಸೆಳೆದಪ್ಪುತ
ಕಾಡದಿರಲಿ.

ಮನದ ಚಿಂತೆ
ಕಳೆದು ಹೋಗುತಲಿ
ಹಗುರಾಗಲಿ.

ಮರೆಯುತಲಿ
ಕಳೆದ ಸಮಯವು
ಬಾಳು ಸಾಗಲಿ.

ಬದುಕಾಗಲಿ
ಚೈತನ್ಯದ ಬೀಡದು
ಮುಂದೆ ಸಾಗಲಿ.

ಕನಸುಗಳು
ನನಸಾಗುವಂಥಹ
ಕಾಲ ಬರಲಿ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ