ಪರಿವೆಯಿರಲಿ
ಕಾಲದ ನೆನವಪಿರಲಿ ಮನಕೆ
ಜಾಣರೆ ಇದ ಸಾರಿರಿ ಜಗಕೆ..
ಸರಿಯುವುದು ಸಮಯವು ಬೇಗ
ಗುರಿ ತಲುಪೆ ನಡೆ ನೀನು ವೇಗ //ಕಾಲದ//
ಓಡುತಿದೆ ಬದುಕು ನಲುಗುತಿದೆ ಮನಸು..
ಬಾಳಲ್ಲಿ ಗೆಲುವನ್ನು ಸೇರು..
ದೂಡದೆಯೆ ಕ್ಷಣವ, ಬಳಸುತಲಿ ದಿನವ
ಮನಸಿನ ಗುರಿಯನ್ನು ತಲುಪು....
ಏರದೆ ಇಳಿಯದೆ ಇದ್ದರೆ ಬಾಳೇನು ಚಂದ? //ಕಾಲದ//
ವಜ್ರದ ತುಣುಕು ಪ್ರತಿಯೊಂದು ಕ್ಷಣವೂ
ಉಜ್ವಲಗೊಳಿಸು ನಿನ್ನ ಸಮಯಾ...
ಹೊಸ ಕನಸು ಕಾಣು, ಹೊಸ ಧ್ಯೇಯ ನೋಡು,
ಗಳಿಸುವೆ ನೀ ಬಯಸಿದ್ದನ್ನು!!
ಬಾಳುತ ಬದುಕುತ ನೆಮ್ಮದಿಯ ಜೀವನ ನಡೆಸು //ಕಾಲದ//
ಸಮಯದ ಜತೆಗೆ ನಡೆಯುತಿದೆ ದಾರಿ..
ಜೀಕುತಿದೆ ಜೀವನ ಜೋಕಾಲಿ..
ನವರಂಧ್ರ ಸೋರಿ, ಪಂಚೇಂದ್ರಿಯ ಕರೆದು
ದಿನವೆಲ್ಲ ಖಾಲಿ ಖಾಲಿ..
ಬಳಲದೆ,ಬಾಡದೆ ಪರಿಶ್ರಮದಿ ತಮ್ಮ ಗುರಿಯ ಸೇರಿ... //ಕಾಲದ//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ