ಬುಧವಾರ, ಅಕ್ಟೋಬರ್ 3, 2018

500. ಶಾಸ್ತ್ರೀಜಿ

ಶಾಸ್ತ್ರೀಜಿ

ಜೈ ಜವಾನ್ ಜೈ ಕಿಸಾನ್
ಎಂದು ಮೊಳಗಿದ ಲಾಲನೆ,
ಸೈನಿಕರಿಗೆ ಸ್ವಾತಂತ್ರ್ಯವನ್ನು
ಗಳಿಸಿ ಕೊಟ್ಟ ಬಹದ್ದೂರನೇ..

ರೈಲ್ವೆ ಮಂತ್ರಿ, ಪ್ರಧಾನ ಮಂತ್ರಿ
ಗೃಹ ಮಂತ್ರಿಯಾದ ಶಾಸ್ತ್ರಿಯವರೇ
ಬಡವರೊಡನೆ ಬಡವರಾಗಿ
ಬದುಕಿ ಬೆಳೆದ ಮಹಾ ಧೀರರೇ..

ಊಟಕ್ಕಿಲ್ಲದೆ ಉಪವಾಸ ಕುಳಿತ
ದೇಶ ಪ್ರೇಮದ ಬಿಂದುವೇ
ನದಿಯ ಈಜಿ ಶಾಲೆ ಕಲಿತ
ಕಷ್ಟ ಪಟ್ಟ ದೇಶ ಬಂಧುವೇ..

ತಗ್ಗಿ ಬಗ್ಗದ ನೇರ ನುಡಿಯ
ಧೀಮಂತ ನಾಯಕನೇ
ಗಾಂಧಿ ಹುಟ್ಟಿದ ದಿನವೇ ಹುಟ್ಟಿದ
ಭಾರತಿಯ ಶ್ರೇಷ್ಠ ಪುತ್ರನೇ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ