ಗಝಲ್-42
ಮನುಜ ನಿನಗೆ ಶುದ್ಧ ಗಾಳಿ ಕೊಡುವೆ, ಗಿಡ ಮರವ ಕಡಿಯುವೆಯಾ..
ನಿನಗೆ ಕುಡಿಯೆ ಸ್ವಚ್ಛ ನೀರ ತರುವೆ, ನದಿಯ ತಳವ ಕದಡುವೆಯಾ..
ಬದುಕ ಕಟ್ಟಿಕೊಳ್ಳ ಬೇಕು ಎಂದು ನಿನಗೆ ತಿಳಿಸಿಕೊಟ್ಟೆ..
ಬೆಳೆಯ ಬೆಳೆಯೆ ಮಣ್ಣನಿಟ್ಟೆ, ತಂದು ವಿಷವ ಬೆರೆಸುವೆಯಾ..
ಭೂಮಿಯಲ್ಲಿ ಮೂರು ದಿನದ ಬಾಳು ನಿನಗೆ.. ಶಬ್ದ ಮಾಡಿ ಕಿವಿ ತಮಟೆಯೊಡೆದು,
ನಾಶ ಪಡಿಸಿ ಪಕ್ಷಿ ಸಂಕುಲವ ಸಾಯುವೆಯಾ....
ಪ್ರಾಣಿ ಸಂಕುಲವನೆಲ್ಲ ಬರಿದು ಮಾಡಿ, ಕೆಲವನ್ನು ನಾಶಮಾಡುವೆ...
ಅಳಿದುಳಿದುದ ತಿಂದು ತೇಗಿ ನೀನೊಬ್ಬನೆ ಭವವ ನಾಶಗೈಯ್ಯುವೆಯಾ...
ಮಾನ ಪ್ರಾಣ ಧನವನೆಲ್ಲ ತಿಂದು ತೇಗಿ, ಹತ್ಯೆಗೈದು ಜೀವವೆಲ್ಲ...
ತಾನೆ ಮೆರೆಯಬೇಕೆಂದು ಬಗೆದು ತನ್ನ ಪೀಳಿಗೆಯ ಮಗುವ ಕೊಲ್ಲುವೆಯಾ..
ಬದುಕೆ ಸಕಲ ಪ್ರೀತಿ -ಪ್ರೇಮ ಬೇಕು, ಪಕ್ಷಿ ಪ್ರಾಣಿ ಕೀಟ ಅರಿಯಬೇಕು..
ತಾನೆ ತನ್ನದೆನುತ ಮೀರಿ ಬಾಳೆ ತನ್ನ ಮನವ ತೊರೆಯುವೆಯಾ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ