ಸೋಮವಾರ, ಅಕ್ಟೋಬರ್ 8, 2018

513. ನಿನ್ನಿರವು

ನೀನು

ಬಾಳ ಪಯಣದಲಿ ನೀನು
ಬರುವ ಮಾತೆ ಖುಷಿಯು....
ಸಾಗಿ ದೂರ ಇನಿಯನೊಡನೆ
ಮನಕೆ ತಂಬಾ ಮುದವು...

ಅಮವಾಸ್ಯೆ ನಡುವೆ  ಜಗಳ
ಮಾತು ಹರಟೆ ಜೋರಾಗೆ..
ಹುಣ್ಣಿಮೆ ಕೈಯ ಹಿಡಿದು
ನಡೆಯೆ ದಿನದ ಗಂಟೆಯಲಿ..

ಚಕ್ರಗಳು ನಿತ್ಯ ತಿರುಗುತಲಿ
ಬಾಳ ಬಂಡಿ ನಡೆವುದು
ಮಂಜಿನಂತೆ ಮುನಿಸು ಕರಗೆ
ಮೌನ ಜಡವ ಮುರಿವುದು..

ಮಮತೆ ಒಲವು ನಾಡಿಮಿಡಿತ
ಅಂತರಾತ್ಮವಿರದು ತಳಮಳ..
ವನದ ಮೂಲೆಯಲ್ಲು ಕಾವು
ಮಳೆ ಗಾಳಿಯು ನೀನಿರೆ ಹಿತ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ