ಅಮ್ಮಾ ಎಸೆದು ಬಿಡೆನ್ನ...
ಅಮ್ಮಾ ಎಸೆದು ಬಿಡೆನ್ನ ಈ ಅಂಧಕಾರ ಕೂಪದಿಂದ..
ಇಲ್ಲಿ ನಿನ್ನ ಹೊರತು ನನಗಾರ ಮೇಲೆಯೂ ನಂಬಿಕೆಯಿಲ್ಲ..
ಹೆಣ್ಣಾಗಿ ಹುಟ್ಟಿರುವುದೇ ನನ್ನ ತಪ್ಪಾಗಿಹುದುದಿಲ್ಲಿ..
ಎಂಟು ತಿಂಗಳ ಹಸುಳೆಯನೂ ಮೋಹಿಸಿ ಸಾಯಿಸುವರಿಲ್ಲಿ..
ಎಸೆಯೆನ್ನ ಎದೆಯಲ್ಲಿ ರಕ್ತವಿರದ ಪಾಪಿಗಳ ಲೋಕದಿಂದ
ಎಸೆದು ಬಿಡೆನ್ನ ಕಣ್ಣಲ್ಲಿ ನರವಿಲ್ಲದವರ ನರಕದಿಂದ..
ದೈವೀ ಶಕ್ತಿಯ ಕೂಪದೊಳಗೆ ನಾ ಹೋಗಿ ಬೀಳುವಂತೆ,
ನಿನ್ನಂಥವರೇ ಅನೇಕಾನೇಕ ಹೃದಯಗಳು ಅಲ್ಲಿರಬೇಕಂತೆ..
ನಿನ್ನ ಮುದ್ದಿನಲಿ ನಾ ಪ್ರಶಾಂತಳಾಗಿ ಬೆಳೆವ ನಂಬಿಕೆಯಿದೆ.
ನಿನ್ನನ್ನೂ ನೆಮ್ಮದಿಯಲಿ ಬದುಕಲು ಬಿಟ್ಟಾರೆಂಬ ಭರವಸೆಯಿಲ್ಲ..
ನನ್ನ ಈ ಜಂಜಡದ ಬದುಕಿಂದ ದೂರ ಅಟ್ಟಿಬಿಡಮ್ಮ..
ಎಸೆದು ಬಿಡಮ್ಮ ನನ್ನ ಶಾಂತಿಯ ಬೀಡಿನ ಕಡೆಗೆ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ