ಪ್ರೀತಿ
ರಾಮರಾಯರು ನಾಯಿಯೊಂದು ಸಾಕಿದ್ದರು. ಅವರೆಷ್ಟು ಅದನ್ನು ಪ್ರೀತಿಸುತ್ತಿದ್ದರೋ ಅವರ ಟಾಮಿಯೂ ಅವರನ್ನು ಅಷ್ಟೇ ಪ್ರೀತಿಸುತ್ತಲಿತ್ತು.
ಅದೊಂದು ದಿನ ರಾಮರಾಯರು ತನ್ನ ವ್ಯವಹಾರದಲ್ಲಿ ಸೋತು, ತಲೆಕೆಟ್ಟು ಊರಿಗೆ ಬರುವುದೇ ಇಲ್ಲ ಎಂದು ಮುಂಬೈ ಬಸ್ಸನ್ನೇರಿ ಹೋದವರು ಅಲ್ಲೇ ಕೆಲಸಕ್ಕೆ ಸೇರಿಕೊಂಡರು. ಅವರು ಹತ್ತಿದ ಬಸ್ ನಿಲ್ದಾಣದಲ್ಲಿ ಅವರನ್ನು ಕಾಯುತ್ತಾ ಕುಳಿತಿದ್ದ ಟಾಮಿ ಅನ್ನ ನೀರಿಲ್ಲದೆ ಒಂದು ವಾರ ಕಾದು ಕಾಣದ ಲೋಕಕ್ಕೆ ಹೋಯಿತು.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ