11.10.2018
ಬದುಕಿನ ಕಡಲಲಿ....
ಅಲೆಯುತಲಿ ಬಂದೆ ನೀನೆನ್ನ ಬಾಳಿನಲಿ
ಕಡಲ ಅಲೆಯ ರೀತಿಯಲಿ....
ಒಪ್ಪಿಕೊಂಡೆ ನಿನ್ನಾ ನಾ ನಲಿಯುತಲಿ...
ನನ್ನ ಬಾಳಲಿ ಬರುವೆಯೆಂಬ ಹಮ್ಮಿನಲಿ...
ನೀನೆ ನಾನು ನಾನೆ ನೀನು
ಆಗಿ ಸಾಗಿದೆವು ಬದುಕ ನಾವೆಯಲಿ..
ಆದರೇನು ಯೋಚನೆಗೆ ನಿಲುಕಲಿಲ್ಲ
ಮುಳುಗೊ ಪರಿಯ ಬಿರುಗಾಳಿಯಲಿ...
ಆನಂದ,ತೃಪ್ತಿ ಗೆಳೆಯರಾಗಿ ಬದುಕುತಲಿ
ಅವನು ಪಡೆದು ಸಂತಸದಿ ಬಾಳಿನಲಿ
ದಿನಗಳುರುಳೆ ಆನಂದ ಕಡಿಮೆ ಆಗುತಲಿ
ತೃಪ್ತಿಗೇನೋ ತೃಪ್ತಿ ಸಿಗದೆ ಓಡುತಲಿ..
ಕಟ್ಟಿ ಇಟ್ಟ ಕನಸ ಪುಡಿ ಮಾಡುತಲಿ
ತನ್ನ ತೃಪ್ತಿಗಾಗಿ ಪರರ ಹುಡುಕುತಲಿ...
ತನ್ನ ಬದುಕಿಗಾನೆ ಕೊಳ್ಳಿ ಇಡುತಲಿ
ಪರನ ತೋಳ ಸೇರಿ ಬದುಕ ದೂಡುತಲಿ..
ಸಮುದ್ರದಲೆಯು ದಡಕೆ ಬಂದು ಸೇರುತಲಿ,
ಕೊನೆಗೆ ಹಿಂದೆ ತನ್ನ ನೀರ ನೆನಪಲಿ ಜಾರುತಲಿ..
ಅಲ್ಲು ಕಳೆದುಕೊಂಡ ತನ್ನ ತೃಪ್ತಿಯಲಿ
ಪ್ರಥಮವದೇ ಉತ್ತಮವೆಂದು ತಿಳಿಯುತಲಿ..
ತೃಪ್ತಿ ತೃಪ್ತವಾಗಿ ಆನಂದನ ಸೇರುತಲಿ,
ಮರು ಸೇರೆ ಆನಂದ ಆನಂದನ ಬಾಳಿನಲಿ...
ತೆರೆಯು ಸೇರೆ ತನ್ನ ಕಡಲ ಒಡಲಿನಲಿ
ಅಬ್ದಿ ನಲಿಯುತಲಿತ್ತು ಕುಣಿದು ಖುಷಿಯಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ