[10/5, 10:55 PM] Prem:
ದೇವರ ಗುಡಿಯೊಳಿಟ್ಟು
ಬೀಗ ಜಡಿದರು
ದೇವರಂಥ ಮಕ್ಕಳ
ತರಗತಿಯ ಒಳಗೆ
ಕೂಡಿ ಹಾಕಿದರು...
@ಪ್ರೇಮ್@
[10/5, 10:55 PM] Prem:
ಅರಿವಿರುವ ಮನುಜ
ಅರಿವಿರದ ಪ್ರಾಣಿಗಳಿಂದ
ಅರಿತು ಕೊಳ್ಳುವಂಥದ್ದು
ಅತಿಯಾದ ವಿಷಯಗಳಿಹುದು..
@ಪ್ರೇಮ್@
[10/5, 10:55 PM] Prem:
ಅಕ್ಷರ ಕಲಿತ ಮಾನವ
ಆಗಿಹನಿಂದು ದಾನವ....
@ಪ್ರೇಮ್@
[10/5, 11:24 PM] Prem:
ಅಕ್ಷರ ಕಲಿತ
ಅನಕ್ಷರಸ್ಥರ
ಸೃಷ್ಠಿ ಮಾಡುತಿವೆ
ಇಂದಿನ ಹಲವಾರು
ವಿದ್ಯಾ ಮಂದಿರಗಳು.
@ಪ್ರೇಮ್@
[10/5, 11:24 PM] Prem:
ಹಣಕಾಗಿ ಬೀಳುತಲಿವೆ
ಸಾಲು ಹೆಣಗಳು.
ಹಣ ಕಂಡರೆ ಅವೂ
ಎದ್ದು ಕೂರುವುವು..!!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ