ಸ್ಪರ್ಧೆಗೆ
ನಮ್ಮ ಸಿಪಾಯಿ
ನಮ್ಮ ನಾಡ ಸಿಪಾಯಿ
ದೇಶ ಕಾಯೊ ಜವಾನ
ಶೂರನೂ ಧೀರನೂ..
ನಮ್ಮಯ ನಾಡಿನ ಹೀರೋ..
ನಮ್ಮ ನಾಡ ಕಾಯುವ
ನಮ್ಮ ಗಡಿಯ ನೋಡುವ
ಹೊಡೆದಾಡಿ ಬಡಿದಾಡಿ
ಪ್ರಾಣದ ಹಂಗು ತೊರೆದು
ಹೋರಾಡುವ.. ಪ್ರಾಣ ತ್ಯಾಗ ಮಾಡುವ..ಅಮರನಾಗುವ..
ನಮ್ಮ ಶೀತ ಭಾಗದಿ
ಶತೃವನ್ನು ಸದೆ ಬಡಿಯುವ
ದೇಶವ ಕಾಪಾಡುವ
ಕಷ್ಟದಿ ತಾನು ಬದುಕುವ
ತನ್ನ ಕುಟುಂಬ ತೊರೆಯುವ
ಒಂಟಿಯಾಗೇ ನುಗ್ಗುವ..
ಮನದಿ ತಾಯಿ ಭಾರತಿಯ ಸ್ತುತಿಸುವ
ತಾಯಿಗಾಗಿ ಬದುಕುವ
ಚಳಿಯಲ್ಲಿ ನಡುಗಿಯೂ
ಮಾತೆಯನ್ನು ರಕ್ಷಿಸುವ..
ಊಟ ತಿಂಡಿ ತಿನ್ನದೆ
ಕಾಯಕದಲ್ಲೆ ತೊಡಗುವ
ಕಷ್ಟದಲ್ಲೆ ದುಡಿಯುವ
ಸುಖವನ್ನು ಬಯಸದೇ
ದೇಶಕ್ಕಾಗೆ ಮರುಗುವ
ಮನದಲ್ಲಿ ದೇಶದ
ಬಗ್ಗೆಯೇ ಯೋಚಿಸುವ
ಸೈನಿಕರಿಗೆ ನಮಿಸುವ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ