ಶುಕ್ರವಾರ, ಅಕ್ಟೋಬರ್ 12, 2018

525. ಮದುವೆಗೋಗೋಣ ಬಾರಾ

ಬಾರಾ ಮದುವೇಗೋಗೋಣ

ನವಿಲಿನಂಗೆ ನಲಿಯುವಾಕಿ
ಕೋಳಿ ಹಂಗೆ ಕುಣಿಯುವಾಕಿ
ನನ್ನ ಅಕ್ಕನ್ ಮಗಳೇ ಆಕಿ
ಅವ್ಳ ಮದ್ವಿಯಂತೆ ನೋಡಾ...

ಕೈಯಾ ತುಂಬಾ ಬಳಿಯ ಹಾಕಿ
ಮೊಗ್ಗಿನ ಜಡೆಗೆ ಮಲ್ಲಿಗೆ ಸಿಗಿಸಿ
ನೆಂಟರಿಷ್ಟರ ಜತೆಗೆ ಸೇರಿ
ಕುಣಿಯುವಾಕಿ ಮಳ್ಳಿ ನೋಡಾ...

ಸಣ್ಣಾಕಿದ್ಳು, ಬೆಳ್ದೇ ಬಿಟ್ಳು
ಹೋಳಿಗೆ ಊಟ ಹಾಕಿಸ್ಬಿಟ್ಳು
ಅಣ್ಣಾ ತಮ್ಮಾ ಅಕ್ಕಾ ಮಾವ
ಎಲ್ರೂ ಬನ್ನಿ ಮುನ್ನಿ ಮದ್ವೇಗೆ..

ಕುದ್ರೀ ಮ್ಯಾಲ ಬರ್ತಾನಂತ
ಮುನ್ನೀ ಗಂಡು ಚೆಲುವರಾಯ
ಮಾನಿನಿಯರ ದಂಡಿನ ಕೂಡೆ
ಬರುವರಂತ ಗಂಡಿನ ಕಡೆಯವ್ರ

ಬೆಳಗಾಗೆದ್ದು ಸ್ನಾನ ಮಾಡಿ
ಮೈಕೈಗೆಲ್ಲಾ ಅರಶಿನ ಹಚ್ಚಿ
ಬೈತಲೆಬೊಟ್ಟು ಕಂಚುಕ ತೊಟ್ಟು
ಹೊರಟು ನಿಂತಾಳ್ ನಮ್ಮ ಹುಡ್ಗಿ..

ಚಿನ್ನ ಬಣ್ಣ ಪಾತ್ರಿ ಪಗಡ
ಸೀರೆ ಹೂವ ರಾಶಿ ರಾಶಿ
ತೆಂಗಿನ ಕಾಯಿ ಮಲ್ಲಿಗೆ ಸೇವಂತಿಗೆ
ಬಾಡದೆ ಕುಂತಾವು ಮುನ್ನಿಗಾಗಿ..

ಅನ್ನದ ರಾಶಿ ತಿಂಡಿಯ ಪೊಟ್ಟಣ
ಕಾಯುತಲಿಹವು ಬಂಧುಗಳಿಗೆ
ನೆಂಟರು ಇಷ್ಟರು ಎಲ್ಲರು ಬರುವರು
ಮುನ್ನಿ ದಾಂಪತ್ಯ ಸೇರುವ ಗಳಿಗೆಗೆ..
@ಪ್ರೇಮ್@

1 ಕಾಮೆಂಟ್‌: