ಸೋಮವಾರ, ಅಕ್ಟೋಬರ್ 15, 2018

531.ಭಾವಗೀತೆ-ನೀನು-ನಾನು

ನೀ....

ನಿನ್ನ ವಿರಹ ನನ್ನ ಕಲಹ
ಬದುಕಲೊಂದು ಒಲವ ತವಕ..
ಕುಹಕ ನೋಟದಲ್ಲು ಮನಕೆ
ತಾಗೋ ಬಾಣ ಮೋಹಕ..

ಜತನದಿಂದ ಕಾಯ್ದ ಪ್ರೀತಿ
ಕಾದ ಸುಖದ ಸರ್ವ ರೀತಿ..
ಹಸಿರ ಹೊತ್ತ ಸಿರಿಯದಂತೆ
ಉಸಿರ ನೀಡೊ ಪಚ್ಚೆಯಂತೆ..

ಎರಡು ಹೃದಯ ನಾಲ್ಕು ಕಣ್ಣು
ಜೀವಗಳು ಒಟ್ಟು ಸೇರಲು..
ಮಾನವತೆಯ ಅಮರ ಪ್ರೇಮ
ಪ್ರತಿ ಹೆಜ್ಜೆಯಲು ಒಂದಾಗಲು..

ನೀನೆ ನಾನು ನಾನೆ ನೀನು
ಎಂಬ ಭಾವ ವದನಕೆ..
ಮುತ್ತಿನಲ್ಲು ಮತ್ತನಿತ್ತೆ
ಸ್ಪರ್ಶ ಸುಖವು ಅದರಕೆ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ